ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡೆನೂರು ಮನು ಬೆನ್ನಲ್ಲೇ ಹಾಸ್ಯ ನಟ ಅಪ್ಪಣ್ಣ ವಿರುದ್ಧ ಗಂಭೀರ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಅಪ್ಪಣ್ಣ ಕಾಮಿಡಿ ಕಿಲಾಡಿಗಳು ಸೀಸನ್ 2ನಿಂದನೂ ನನಗೆ ಹಿಂಸೆ ಕೊಡ್ತ ಇದ್ದ. ಶೋಗಳಿಗೆ ಕರೆದುಕೊಂಡು ಹೋಗಿ ಹಿಂಸೆ ಕೊಡ್ತಾನೆ ಇದ್ದ. ಅಪ್ಪಣ್ಣ ನನಗೆ ಕೆಟ್ಟ ದೃಷ್ಟಿಯಲ್ಲಿ ನೋಡ್ತಿದ್ದ. ಮಾನಸಿಕವಾಗಿ ಹಿಂಸೆ ತುಂಬಾ ಟಾರ್ಚರ್ ಕೊಡ್ತಾ ಇದ್ದನು. ನಾನು ಸೂಸೈಡ್ ಮಾಡಿಕೊಂಡ್ರೆ ಅಪ್ಪಣ್ಣನೇ ಕಾರಣ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ
ಕಾಮಿಡಿ ಕಿಲಾಡಿಗಳು ಖ್ಯಾತಿಯ , ಕಿರುತೆರೆ ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಎಫ್ ಐ ಆರ್ ದಾಖಲಾಗಿದೆ. ಸದ್ಯ ಮಡೆನೂರು ಮನು ಪೊಲೀಸರ ವಶದಲ್ಲಿದ್ದಾನೆ.
ಕಿರುತೆರೆ ನಟಿ ಮಡೆನೂರು ಮನು ಮೇಲೆ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಕಿರುತೆರೆ ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.