ಪಾಟ್ನಾ: ಬಿಹಾರದಲ್ಲಿ ರೋಡ್ ಶೋ ವೇಳೆ ವಾಹನ ಡಿಕ್ಕಿ ಹೊಡೆದು ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಪಕ್ಕೆಲುಬಿಗೆ ಗಾಯವಾಗಿದೆ.
ಬಿಹಾರದ ಅರ್ರಾದಲ್ಲಿ ರೋಡ್ ಶೋ ವೇಳೆ ಘಟನೆ ನಡೆದಿದ್ದು ಪ್ರಶಾಂತ್ ಕಿಶೋರ್ ಗಾಯಗೊಂಡಿದ್ದಾರೆ.
ಚುನಾವಣಾ ತಂತ್ರಜ್ಞ, ರಾಜಕಾರಣಿ ಮತ್ತು ಜಾನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಗುರುವಾರ ಅರ್ರಾದಲ್ಲಿ ನಡೆದ ರೋಡ್ ಶೋನಲ್ಲಿ ಬೆಂಬಲಿಗರನ್ನು ಸ್ವಾಗತಿಸಲು ತಮ್ಮ ವಾಹನದಿಂದ ಹೊರಗೆ ಬಾಗಿದ್ದಾಗ ಪಕ್ಕೆಲುಬಿಗೆ ಗಾಯವಾಗಿದೆ ಎಂದು ಹೇಳಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.