ಬೆಂಗಳೂರು : ಧರಣಿಯಲ್ಲಿ ಭಾಗಿಯಾಗಲು ಬಂದಿದ್ದ ರೈತ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಮೃತರನ್ನು ರೈತ ಈಶ್ವರ (50) ಎಂದು ಗುರುತಿಸಲಾಗಿದೆ. ಮೂಲತಹ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುರುಬರಹುಂಡಿ ನಿವಾಸಿಯಾಗಿದ್ದ ಈಶ್ವರ್ ಮೆಜೆಸ್ಟಿಕ್ ನಲ್ಲಿ ರೈಲು ಇಳಿದು ಫ್ರೀಡಂಪಾರ್ಕ್ ಗೆ ತೆರಳುತ್ತಿದ್ದರು.
ಧರಣಿಯಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಪೊಲೀಸರು ಸಿಪಿಆರ್ ಮಾಡಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದು, ಆದರೆ ಅಷ್ಟರಲ್ಲೇ ಈಶ್ವರ ಅವರು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಈಶ್ವರ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.