BREAKING: ಜಾತ್ರೆ ಬಂದೋಬಸ್ತ್ ಗೆ ಬಂದಿದ್ದ ASI ಹೃದಯಾಘಾತದಿಂದ ಸಾವು

ಬೆಳಗಾವಿ: ಜಾತ್ರೆ ಬಂದೋಬಸ್ತ್ ಗೆ ಬಂದಿದ್ದ ಎಎಸ್ ಐ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲಕ್ಷ್ಮೀದೇವಿ ಜಾತ್ರೆ ಬಂದೋಬಸ್ತ್ ಗೆ ಬಂದಿದ್ದ ಎ ಎಸ್ ಐ ಮೀರಾನಾಯಕ್ (56) ಹೃದಯಾಘಾತದಿಂದ ಮೃತಪಟ್ಟಿದ್ದಾರೆ

ಹುಬ್ಬಳ್ಳಿಯ ಎಪಿಎಂಸಿ ಠಾಣೆಯ ಎಲ್.ಜಿ.ಮೀರಾನಾಯಕ್ ಅವರನ್ನು ಗೋಕಾಕ್ ನ ಲಕ್ಷ್ಮೀದೇವಿ ಜಾತ್ರೆಗೆ ಬಂದೋಬಸ್ತ್ ಗೆ ನೇಮಿಸಲಾಗಿತ್ತು. ಇಂದು ಬೆಳಿಗ್ಗೆ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಎ ಎಸ್ ಐ ಮೀರಾನಾಯಕ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಅವರ ಮೃತದೇಹ ಶಿಫ್ಟ್ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read