ಡಿಜಿಟಲ್ ಡೆಸ್ಕ್ : ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಬೇಟೆಯಾಡಿದ್ದು, 48 ಗಂಟೆಗಳಲ್ಲಿ ಒಟ್ಟು ಆರು ಉಗ್ರರ ಎನ್ ಕೌಂಟರ್ ಮಾಡಿದೆ.
ಮೇ 13 ರಂದು ಜಮ್ಮು-ಕಾಶ್ಮೀರದ ಶೋಫಿಯಾನದಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು. ಈ ಬೆನ್ನಲ್ಲೇ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಈ ಮೂಲಕ 48 ಗಂಟೆಗಳಲ್ಲಿ ಒಟ್ಟು ಆರು ಉಗ್ರರ ಎನ್ ಕೌಂಟರ್ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ನಾದಿರ್ ಗ್ರಾಮದಲ್ಲಿ ಗುರುವಾರ ಮುಂಜಾನೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. 48 ಗಂಟೆಗಳ ಒಳಗೆ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಎರಡನೇ ಎನ್‌ಕೌಂಟರ್ ಇದಾಗಿದೆ.

Chinar Corps of the Indian Army tweets, "On 15 May 2025, based on specific intelligence input from Int agency, a Cordon & Search Operation was launched by Indian Army, J&K Police and Srinagar Sector CRPF at Nader, Tral, Awantipora. Suspicious activity was observed by vigilant… pic.twitter.com/trKQPgNkhN
— ANI (@ANI) May 15, 2025