ಬೆಂಗಳೂರು: ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ಸ್ನೇಹಿತೆಯ ಖಾಸಗಿ ವಿಡಿಯೋ, ಫೋಟೋ ಇಟ್ತುಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಆರೋಪ ಕೇಳಿಬಂದಿದೆ.
ಈ ಬಗ್ಗೆ 61 ವರ್ಷದ ಪಾರ್ವತಿ ಎಂಬುವವರು ಆಶಾ ಜೋಯಿಸ್ ವಿರುದ್ಧ ದೂರು ದಾಖಲಿಸಿದ್ದಾರೆ. ಸ್ನೇಹಿತೆಯ ಖಾಸಗಿ ವಿಡಿಯೋ, ಫೋಟೋ ಇಟ್ಟುಕೊಂಡು 2 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲ್ ಮಾಡಲು ಪ್ರಚೋದನೆ ನೀಡಿದ್ದಾರೆ. ಪಾರ್ವತಿ ಎಂಬುವವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ತಾನು ಶೃಂಗೇರಿ ಮೂಲದ ಜೋಯಿಸ್ ಕುಟುಂಬದವಳು. ಸೀರಿಯಲ್ ನಟಿ ಎಂದು ಪರಿಚಯಿಸಿಕೊಂಡಿದ್ದಳಿ. ಪಾರ್ವತಿ ಎಂಬುವವರು ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕನನ್ನು ಮದುವೆಯಾಗಿದ್ದರು. ಪತಿಗೆ ಬ್ಲ್ಯಾಕ್ ಮೇಲ್ ಮಾಡುವಂತೆ ಆಶಾ ಜೋಯಿಸ್ ಕಿರುಕುಳ ನೀಡುತ್ತಿರುವುದಲ್ಲದೇ ಬಲವಂತ ಮಾಡುತ್ತಿದ್ದಾರೆ. ಇದಕ್ಕೆ ಪಾರ್ವತಿ ಒಪ್ಪದಿದ್ದಾಗ ಬೆದರಿಕೆ ಹಾಕಿದ್ದಾರೆ. ಖಾಸಗಿ ವಿಡಿಯೋ, ವಾಯ್ಸ್ ರೆಕಾರ್ಡ್, ಫೋಟೋ ಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಆಶಾ ಜೋಯಿಸ್ ವಿರುದ್ಧ ತಿಲಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
