ದಿಟ್ಟ ಮಹಿಳೆಯೊಬ್ಬರು ಕಳ್ಳನೊಬ್ಬನನ್ನು ತನ್ನ ಧೈರ್ಯಶಾಲಿ ಪಂಚ್‌ಗಳ ಮೂಲಕ ಹಿಮ್ಮೆಟ್ಟಿಸಿದ ವಿಡಿಯೋ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ X (ಹಿಂದೆ ಟ್ವಿಟರ್) ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮಹಿಳೆಯ ದಿಟ್ಟತನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾತ್ರಿಯ ವೇಳೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳನ್ನು ಇಬ್ಬರು ಬೈಕ್‌ನಲ್ಲಿ ಬಂದ ಕಳ್ಳರು ಅಡ್ಡಗಟ್ಟಲು ಯತ್ನಿಸಿದರು. ಆದರೆ ಮಹಿಳೆ ಎದೆಗುಂದದೆ ಕಳ್ಳನ ಮೇಲೆ ಮುಗಿಬಿದ್ದು ಪಂಚ್‌ಗಳ ಸುರಿಮಳೆ ಗರೆದಳು. ದಿಢೀರ್ ದಾಳಿಯಿಂದ ಕಂಗಾಲಾದ ಕಳ್ಳ ತಕ್ಷಣವೇ ತನ್ನ ಸಹಚರನೊಂದಿಗೆ ಬೈಕ್‌ನಲ್ಲಿ ಪರಾರಿಯಾದ.
ಈ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಹಿಳೆಯ ದಿಟ್ಟತನವನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಕಳ್ಳನನ್ನು ಹಿಮ್ಮೆಟ್ಟಿಸಿದ ಬಳಿಕ ಮಹಿಳೆ ಯಾವುದೇ ಆತಂಕವಿಲ್ಲದೆ ತನ್ನ ದಾರಿಯಲ್ಲಿ ಮುಂದೆ ಸಾಗಿದ್ದು, ಆಕೆಯ ಧೈರ್ಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಅನೇಕ ಬಳಕೆದಾರರು ಮಹಿಳೆಯ ಧೈರ್ಯವನ್ನು ಹೊಗಳಿದ್ದಾರೆ. ಹೇಡಿಯನ್ನು ಎದುರಿಸಲು ಸ್ವಲ್ಪ ಧೈರ್ಯವಿದ್ದರೂ ಸಾಕು ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮಹಿಳೆಯ ಧೈರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
She only fears God pic.twitter.com/JKbKV4hDCk
— out of context brazil 🇧🇷 (@oocbrazill) April 2, 2025