ಮತ್ತೋರ್ವ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಸೈಟ್ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ ಬ್ರಹ್ಮಾನಂದ ಗುರೂಜಿ ಲೈಂಗಿಕ ದೌರ್ಜ್ಯನ

ಬೆಂಗಳೂರು: ಮೆಳೆಕೋಟೆಯಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

ಮಹಿಳೆಯೊಬ್ಬರಿಗೆ ಸೈಟ್ ಕೊಡಿಸುವುದಾಗಿ ಹೇಳಿ ಹಣ ಪಡೆದಿದ್ದ ಬ್ರಹ್ಮಾನಂದ ಗುರೂಜಿ, ಸೈಟ್ ಕೊಡಿಸದೇ ವಂಚಿಸಿದ್ದಾರೆ. ಅಲ್ಲದೇ ಹಣ ವಾಪಾಸ್ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಸ್ವಾಮೀಜಿಯವರ ನಿವಾಸದ ಬಳಿಯೇ ಮಹಿಳೆ ಹಾಗೂ ಆಕೆಯ ಪತಿ ವಾಸವಾಗಿದ್ದರಿಂದ ಸ್ವಾಮೀಜಿ ಪರಿಚಯವಿತ್ತು. ಸ್ವಾಮೀಜಿ ತಮ್ಮ ಪರಿಚಯದವರಿಂದ ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ಭರವಸೆ ಕೊಡಿಸುವುದಾಗಿ ಹೇಳಿದ್ದರು. 13 ಲಕ್ಷದ ಸೈಟ್ ನ್ನು 12 ಲಕ್ಷಕ್ಕೆ ಕೊಡಿಸುವುದಾಗಿ ಹೇಳಿದ್ದರು. ಮಹಿಳೆ ತಮ್ಮ ಬಳಿ 8 ಲಕ್ಷ ಮಾತ್ರ ಹಣವಿದೆ ಎಂದಿದ್ದರು. ಅದಕ್ಕೆ ಸ್ವಾಮೀಜಿ ತಾನು ಸಹಾಯ ಮಾಡುವುದಾಗಿ ಹೇಳಿದ್ದರು. ಮಹಿಳೆಯ ಬಳಿ ಇದ್ದ 8 ಲಕ್ಷದಲ್ಲಿ 5 ಲಕ್ಷ ಹಣವನ್ನು ಸ್ವಾಮೀಜಿ ಅಡ್ವಾನ್ಸ್ ಆಗಿ ಬೇರೆಯವರಿಗೆ ಕೊಡಿಸಿದ್ದರು. ಒಂದು ವರ್ಷ ಕಳೆದರೂ ಸೈಟ್ ನೀಡದೇ ಅಡ್ವಾನ್ಸ್ ಹಣವನ್ನೂ ವಾಪಸ್ ಕೊಡದೇ ಇದ್ದಾಗ ಮಹಿಳೆ ಸ್ವಾಮೀಜಿ ಬಳಿ ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ.

ಇದಕ್ಕೆ ಸ್ವಾಮೀಜಿ ಹಣ ಕೊಡಬೇಕೆಂದರೆ ತನ್ನ ರೂಮಿಗೆ ಬಾ ಎಂದು ಕರೆದಿದ್ದಾರೆ. ನಿನಗೆ ಹಣ ಬೇಕು ಎಂದರೆ ನಾನ್ಯಾಕೆ ಫ್ರೀಯಾಗಿ ಕೊಡಲಿ ರೂಂ ಗೆ ಬಂದರೆ ಕೊಡುತ್ತೇನೆ ಎಂದಿದ್ದಾರೆ. ಸ್ವಾಮೀಜಿ ನಿರಂತರವಾಗಿ ಕರೆ ಮಾಡಿ ಮಹಿಳೆಯನ್ನು ಮಂಚಕ್ಕೆ ಕರೆದಿದ್ದಾರೆ ಎನ್ನಲಾಗಿದೆ. ಇದರಿಂದ ನೊಂದ ಮಹಿಳೆ ಸ್ವಾಮೀಜಿ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದು, ಈ ವಿಷಯ ತಿಳಿದ ಸ್ವಾಮೀಜಿ ಮಹಿಳೆಯ ಮನೆಗೆ ಬಂದು ಕಿರುಕುಳ ನೀಡಿ ಮೊಬೈಲ್ ನಲ್ಲಿದ್ದ ರೆಕಾರ್ಡ್ ಡಿಲಿಟ್ ಮಾಡುವಂತೆ ಒತ್ತಾಯಿಸಿದ್ದಾರೆ. ಡಿಲಿಟ್ ಮಾಡಿದರೆ 50 ಸಾವಿರ ಹಣ ಕೊಡುವುದಾಗಿ ಹೇಳಿದ್ದಾರಂತೆ. ಬ್ರಹ್ಮಾನಂದ ಗುರೂಜಿ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಬ್ರಹ್ಮಾನಂದ ಗುರೂಜಿ ಮಹಿಳೆ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ ಮಾಡಿ ದೂರು ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read