ಬಿಪಿಎಲ್ ಕಾರ್ಡ್ ಹೊಂದಿದ ‘ಅನ್ನಭಾಗ್ಯ’ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್

ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯರಿಗೆ 170 ರೂ.ರಂತೆ ಡಿಬಿಟಿ  ಮುಖಾಂತರ ಹಣ ಪಾವತಿಸಲಾಗುತ್ತಿರುತ್ತದೆ. ಫೆಬ್ರವರಿ-2025ರ ಮಾಹೆಯಿಂದ ಪ್ರತಿ ಸದಸ್ಯರಿಗೆ 170 ರೂ.ರ ಡಿಬಿಟಿ ಹಣ ಬದಲಾಗಿ 5 ಕೆ.ಜಿ.ಅಕ್ಕಿಯನ್ನು ವಿತರಿಸಲು ತೀರ್ಮಾನಿಸಲಾಗಿರುತ್ತದೆ.

ಪ್ರಯುಕ್ತ ಏಪ್ರಿಲ್-2025ರ ಮಾಹೆಯ ಆಹಾರಧಾನ್ಯ ಬಿಡುಗಡೆಯಾಗಿದ್ದು, ಏಪ್ರಿಲ್-2025ರ ಮಾಹೆಯಲ್ಲಿ  ಆದ್ಯತಾ(ಬಿಪಿಎಲ್) ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 10 ಕೆ.ಜಿ.ಅಕ್ಕಿ ಹಾಗೂ ಅಂತ್ಯೋದಯ ಎಎವೈ ಪಡಿತರ ಚೀಟಿದಾರರಿಗೆ 1 ರಿಂದ 3 ಸದಸ್ಯರಿಗೆ 35 ಕೆ.ಜಿ.ಅಕ್ಕಿ, 4 ಸದಸ್ಯರಿಗೆ 40 ಕೆ.ಜಿ.ಅಕ್ಕಿ, 5 ಸದಸ್ಯರಿಗೆ 50 ಕೆ.ಜಿ.ಅಕ್ಕಿ, 6  ಸದಸ್ಯರಿಗೆ 60 ಕೆ.ಜಿ.ಅಕ್ಕಿ, 7 ಸದಸ್ಯರಿಗೆ 70 ಕೆ.ಜಿ.ಅಕ್ಕಿ, 8 ಸದಸ್ಯರಿಗೆ 80 ಕೆ.ಜಿ.ಅಕ್ಕಿ, 9 ಸದಸ್ಯರಿಗೆ 90 ಕೆ.ಜಿ.ಅಕ್ಕಿ ಹಾಗೂ 10 ಸದಸ್ಯರಿಗೆ 100  ಕೆ.ಜಿ ಅಕ್ಕಿ ವಿತರಿಸಲಾಗುವುದು.

ಮುಂದುವರೆದು 10ಕ್ಕಿಂತ ಮೇಲ್ಪಟ್ಟ ಪಡಿತರ ಚೀಟಿಗೆ ಇದೇ ಅನುಪಾತದಂತೆ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಚಿತ್ರದುರ್ಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read