‌ʼಜಿಮ್ಮಿ ಜಿಮ್ಮಿʼ ಹಾಡಿಗೆ ವಿದೇಶಿ ಹುಡುಗನ ಭರ್ಜರಿ ಡಾನ್ಸ್;‌ ವಿಡಿಯೋ ವೈರಲ್

ಬಿಡುಗಡೆಯಾಗಿ ನಾಲ್ಕು ದಶಕಗಳೇ ಕಳೆದರೂ ಸಹ ಬಪ್ಪಿ ಲಹಿರಿಯವರ ’ಜಿಮ್ಮಿ ಜಿಮ್ಮಿ ಆಜಾ ಆಜಾ’ ಹಾಡು ಇಂದಿಗೂ ಸಹ ಜನರನ್ನು ಕುಣಿಯುವಂತೆ ಮಾಡುವ ಎವರ್‌ಗ್ರೀನ್ ಹಿಟ್ ಆಗಿದೆ.

ಪಾರ್ವತಿ ಖಾನ್ ಹಾಗೂ ವಿಜಯ್ ಬೆನೆಡಿಕ್ಟ್ ಹಾಡಿರುವ ಈ ಸೂಪರ್‌ಹಿಟ್ ಹಾಡು ಭಾರತದಲ್ಲಿ ಮಾತ್ರವಲ್ಲದೇ ಕೇಂದ್ರ ಏಷ್ಯಾದ ಅನೇಕ ಕಡೆಗಳಲ್ಲಿ ಜನಪ್ರಿಯವಾಗಿದೆ.

ಕೇಂದ್ರ ಏಷ್ಯಾದ ಕುಟುಂಬವೊಂದು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್‌ನ 1982ರ ಈ ಹಿಟ್ ಹಾಡಿಗೆ ಮಕ್ಕಳು ಕುಣಿಯುತ್ತಿರುವುದನ್ನು ನೋಡಬಹುದಾಗಿದೆ.

ಟ್ವಿಟರ್‌ ಬಳಕೆದಾರರೊಬ್ಬರು ಈ ವಿಡಿಯೋ ಶೇರ್‌ ಮಾಡಿದ್ದು, “ನಮ್ಮ ಸೋವಿಯತ್ ಪರ್ಶಿಯನ್ ಸಹೋದರರು ಬಾಲಿವುಡ್ ಹಿಟ್ ’ಜಿಮ್ಮಿ ಜಿಮ್ಮಿ ಆಜಾ ಆಜಾ’ಗೆ ಈಗಲೂ ಕುಣಿಯುತ್ತಿದ್ದಾರೆ,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಹಾಡಿಗೆ ಮಸ್ತ್‌ ಸ್ಟೆಪ್‌ ಹಾಕುತ್ತಿರುವ ಬಾಲಕನಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

https://twitter.com/JrRezvani/status/1636249738142965760

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read