ಅಣ್ಣನ ಜೀವ ಉಳಿಸಲು ಅಸ್ಥಿಮಜ್ಜೆ ದಾನ ಮಾಡಿದ ಪುಟ್ಟ ತಮ್ಮ: ಭಾವುಕ ವಿಡಿಯೋ ವೈರಲ್​

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ಅಣ್ಣನಿಗೆ ತಮ್ಮನೊಬ್ಬ ತನ್ನ ಅಸ್ಥಿಮಜ್ಜೆಯನ್ನು ದಾನ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅಣ್ಣ-ತಮ್ಮನ ಸಂಭಾಷಣೆ ಕಣ್ಣೀರು ತರಿಸುತ್ತದೆ.
ಪ್ರೆಸ್ಟನ್ ಎಂಬ ಅಣ್ಣನಿಗೆ ತಮ್ಮ ಅಸ್ಥಿಮಜ್ಜೆಯನ್ನು ದಾನ ಮಾಡಿದ್ದಾನೆ.

ಹೀಗೆ ದಾನ ಮಾಡಿದ ತಮ್ಮನೇ ನನ್ನ ಜೀವನದ ಸೂಪರ್ ಹೀರೋ ಎಂದು ಅಣ್ಣ ಹೇಳುವುದನ್ನು ಕೇಳಬಹುದು. ಈ ಸಂಭಾಷಣೆ ಭಾವುಕವಾಗಿದೆ. ಮಜಿಕಲಿ ಎನ್ನುವವರು ಇದನ್ನು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

“ನೀನು ನನ್ನನ್ನು ಕಾಪಾಡಿದೆ. ನೀನು ನನ್ನ ಜೀವನದ ಸೂಪರ್ ಹೀರೋ ಎಂದು ಹೇಳಿದ್ದನ್ನು ಕೇಳಬಹುದು. ಆಸ್ಪತ್ರೆಯಲ್ಲಿ ಅವರ ಮಾತುಕತೆ ನಡೆಯುತ್ತಿದೆ. ದಾನ ಮಾಡಿ ಜೀವ ಉಳಿಸಿದ್ದಕ್ಕಾಗಿ ತಮ್ಮ ಕೃತಜ್ಞತೆ ಹೇಳಿರುವುದನ್ನು ಕೇಳಬಹುದು.

ಕಳೆದ ಪ್ರೇಮಿಗಳ ದಿನದಂದು ಪ್ರೆಸ್ಟನ್ ಮೂಳೆ ಮಜ್ಜೆಯ ಕಸಿ ಮಾಡಿಸಿಕೊಂಡಿದ್ದಾನೆ. ನೆಟಿಜನ್‌ಗಳು ಹೃದಯಸ್ಪರ್ಶಿ ವೀಡಿಯೊವನ್ನು ಇಷ್ಟಪಟ್ಟಿದ್ದು, ಥಹರೇವಾರಿ ಕಮೆಂಟ್​ ಹಾಕುತ್ತಿದ್ದಾರೆ. ಮಕ್ಕಳಿಗೆ ದೀರ್ಘಾಯುಷ್ಯವನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read