ಹೊಸಪೇಟೆ(ವಿಜಯನಗರ): ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಯಡ್ರಮ್ಮನಹಳ್ಳಿಯಲ್ಲಿ ವಿಷಾಹಾರ ಸೇವಿಸಿ ಬಾಲಕ ಮೃತಪಟ್ಟಿದ್ದಾನೆ.
ದುರ್ಗೇಶ್(14) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ದುರ್ಗೇಶನ ತಾಯಿ ಕಮಲಮ್ಮ ಮತ್ತು ಸಹೋದರ ಪ್ರಜ್ವಲ್ ಸ್ಥಿತಿ ಗಂಭೀರವಾಗಿದೆ. ಗುಡ್ಲನೂರು ಬಸವರಾಜ ಅವರ ಪತ್ನಿ ಕಮಲಮ್ಮ ಮತ್ತು ಪುತ್ರರಾದ ಪ್ರಜ್ವಲ್ ಹಾಗೂ ದುರ್ಗೇಶ್ ಶನಿವಾರ ರಾತ್ರಿ ಊಟ ಮಾಡಿದ ನಂತರ ಆಹಾರ ವಿಷಪೂರಿತವಾಗಿದ್ದರಿಂದ ಮೂವರಿಗೂ ವಾಂತಿ ಭೇದಿಯಾಗಿ ತೀವ್ರ ಅಸ್ವಸ್ಥರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಪ್ಪಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ದುರ್ಗೇಶ್ ಮೃತಪಟ್ಟಿದ್ದಾನೆ. ತಾಯಿ ಕಮಲಮ್ಮ ಚೇತರಿಸಿಕೊಳ್ಳುತ್ತಿದ್ದು, ಪ್ರಜ್ವಲ್ ಸ್ಥಿತಿ ಗಂಭೀರವಾಗಿದೆ.