ಬಾಂಬೆ : ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕುವ ಇಮೇಲ್ ಬಂದಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಬಾಂಬ್ ಸ್ಕ್ವಾಡ್ ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದರು ಆದರೆ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ.
ಮುಂಬೈ ಪೊಲೀಸರ ಪ್ರಕಾರ, ಬಿಎಸ್ಇಗೆ ಬೆದರಿಕೆ ಇಮೇಲ್ ‘ಕಾಮ್ರೇಡ್ ಪಿಣರಾಯಿ ವಿಜಯನ್’ ಎಂಬ ಐಡಿಯಿಂದ ಬಂದಿದೆ. “ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಟವರ್ ಬಿಲ್ಡಿಂಗ್ನಲ್ಲಿ 4 ಆರ್ಡಿಎಕ್ಸ್ ಐಇಡಿ ಬಾಂಬ್ಗಳನ್ನು ಇರಿಸಲಾಗಿದ್ದು, ಮಧ್ಯಾಹ್ನ 3 ಗಂಟೆಗೆ ಸ್ಫೋಟಗೊಳ್ಳಲಿದೆ” ಎಂದು ಬೆದರಿಕೆ ಹಾಕಲಾಗಿದೆ . ಬೆದರಿಕೆ ಕರೆ ಬಂದ ಕೂಡಲೇ ಬಿಎಸ್ಇ ಅಧಿಕಾರಿಗಳು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಂಬ್ ನಿಷ್ಕ್ರಿಯ ದಳ ಮತ್ತು ಸ್ಥಳೀಯ ಪೊಲೀಸ್ ಘಟಕಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದವು.
You Might Also Like
TAGGED:ಬಾಂಬೆ ಸ್ಟಾಕ್ ಎಕ್ಸ್’ಚೇಂಜ್