ಮುಂಬೈ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (89) ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 89 ವರ್ಷದ ಧರ್ಮೇಂದ್ರ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಸ್ಥಿತಿ ಗಂಭೀರವಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.
ಧರ್ಮೇಂದ್ರ 1960 ರಲ್ಲಿ ದಿಲ್ ಭಿ ತೇರಾ ಹಮ್ ಭಿ ತೇರೆ ಮೂಲಕ ಪಾದಾರ್ಪಣೆ ಮಾಡಿದರು ಅವರು ಮೊದಲ ಬಾರಿಗೆ 1960 ರ ದಶಕದ ಮಧ್ಯಭಾಗದಲ್ಲಿ ಆಯೀ ಮಿಲನ್ ಕಿ ಬೇಲಾ , ಫೂಲ್ ಔರ್ ಪತ್ಥರ್ ಮತ್ತು ಆಯೆ ದಿನ್ ಬಹರ್ ಕೆ ಮುಂತಾದ ಚಲನಚಿತ್ರಗಳಿಗೆ ಜನಪ್ರಿಯತೆಯನ್ನು ಗಳಿಸಿದರು .
