3 ಈಡಿಯಟ್ಸ್ ಸಿನಿಮಾ ಖ್ಯಾತಿಯ ಹಿರಿಯ ಬಾಲಿವುಡ್ ನಟ ಅಚ್ಯುತ್ ಪೋತರ್ ಅವರು ಸೋಮವಾರ, ಆಗಸ್ಟ್ 18, 2025 ರಂದು ನಿಧನರಾದರು.
ಅವರಿಗೆ 91 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆ ಅವರನ್ನು ಥಾಣೆಯ ಜುಪಿಟರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಥಾಣೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಸಿನಿಮಾ ರಂಗಕ್ಕೂ ಬರುವ ಮುನ್ನ ಅಚ್ಯುತ್ ಪೋತರ್ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ನಂತರ ಇಂಡಿಯನ್ ಆಯಿಲ್ ಕಂಪನಿಯಲ್ಲಿ ಕೆಲಸ ಮಾಡಿದರು. ನಟನೆಯ ಮೇಲಿದ್ದ ಅವರ ಉತ್ಸಾಹವು ಅಂತಿಮವಾಗಿ 1980 ರ ದಶಕದಲ್ಲಿ ಅವರನ್ನು ಚಲನಚಿತ್ರಗಳು ಮತ್ತು ದೂರದರ್ಶನದತ್ತ ಕೊಂಡೊಯ್ದಿತು, ಪೋತದಾರ್ ಹಿಂದಿ ಮತ್ತು ಮರಾಠಿ ಚಿತ್ರರಂಗದಾದ್ಯಂತ ಸುಮಾರು 125 ಚಿತ್ರಗಳಲ್ಲಿ ನಟಿಸಿದ್ದಾರೆ. ಆಕ್ರೋಶ್, ಆಲ್ಬರ್ಟ್ ಪಿಂಟೋ ಕೋ ಗುಸ್ಸಾ ಕ್ಯೂನ್ ಆತಾ ಹೈ, ಅರ್ಧ ಸತ್ಯ, ತೇಜಾಬ್, ಪರಿಂದಾ, ರಾಜು ಬನ್ ಗಯಾ ಜಂಟಲ್‌ಮ್ಯಾನ್, ದಿಲ್ವಾಲೆ, ರಂಗೀಲಾ, ವಾಸ್ತವ್, ಹಮ್ ಸಾಥ್ ಸಾಥ್ ಹೇ, ಪರಿಣೀತಾ, ಲಗೇ ರಹೋ ಮುಗ್ಗಾಟೋರ್ 2 ಮತ್ತು ಲಗೇ ದಬಾನಟೋರ್ 2 ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.