ಬಾಲಿವುಡ್‌ ನ ಈ ಚಿತ್ರದಲ್ಲಿತ್ತು ಅತಿ ಹೆಚ್ಚು ʼಕಿಸ್‌ʼ ದೃಶ್ಯಾವಳಿ….! ಇಷ್ಟೆಲ್ಲಾ ಗಿಮಿಕ್‌ ಮಾಡಿದರೂ ಬಾಕ್ಸಾಫೀಸ್‌ ನಲ್ಲಿ ʼಫ್ಲಾಪ್ʼ

ಅತಿ ಹೆಚ್ಚು ಕಿಸ್ಸಿಂಗ್‌ ದೃಶ್ಯ ಇರುವ ಸಿನಿಮಾ ಯಾವ್ದು ಅಂತ ಕೇಳಿದ್ರೆ ಬಹುತೇಕರ ಬಾಯಲ್ಲಿ ಬರೋದು ಮರ್ಡರ್.‌ ಇಮ್ರಾನ್‌ ಹಶ್ಮಿ ಹಾಗೂ ಮಲಿಕಾ ಶೆರಾವತ್‌ʼ ಮರ್ಡರ್ ಚಿತ್ರದಲ್ಲಿ ಸಿಗ್ಗು ಬಿಟ್ಟು ನಟಿಸಿದ್ದರು. ಇಬ್ಬರು ತೆರೆ ಮೇಲೆ 20 ಬಾರಿ ಮುತ್ತಿಟ್ಟುಕೊಂಡಿದ್ದರು. ಆದ್ರೆ ಇಮ್ರಾನ್‌ ಹಶ್ಮಿ, ಮಲಿಕಾ ಶೆರಾವತ್‌ ಹಿಂದಿಕ್ಕಿದ ಜೋಡಿ ಬಾಲಿವುಡ್‌ ನಲ್ಲಿದೆ. ಅವರು 20 ಬಾರಿಯಲ್ಲ 30 ಬಾರಿ ಕಿಸ್‌ ಮಾಡ್ಕೊಂಡಿದ್ದಾರೆ.

ಅದು ಬೇರೆ ಯಾವ್ದೂ ಅಲ್ಲ, ಪ್ಲಾಪ್‌ ಚಿತ್ರಗಳಲ್ಲಿ ಒಂದಾದ 3ಜಿ. ಈ ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್ ಮತ್ತು ಸೋನಾಲ್ ಚೌಹಾಣ್ ಕಾಣಿಸಿಕೊಂಡಿದ್ದರು. 2013 ರಲ್ಲಿ ಬಿಡುಗಡೆಯಾದ ಇದು ಹಾರರ್-ಥ್ರಿಲ್ಲರ್ ಸಿನಿಮಾ. ಇಲ್ಲಿ ಹಾರರ್‌ ಗಿಂತ ಕಿಸ್ಸಿಂಗ್‌ ದೃಶ್ಯವೇ ಹೆಚ್ಚಿತ್ತು.

ಶೀರ್ಶಕ್ ಆನಂದ್ ಮತ್ತು ಶಂತನು ರಾಯ್‌ ನಿರ್ದೇಶನದ ಈ ಚಿತ್ರದಲ್ಲಿ ಇಷ್ಟೊಂದು ಮುತ್ತಿಡುವ ದೃಶ್ಯವಿದ್ರೂ ಚಿತ್ರ ಸಕ್ಸಸ್‌ ಕಾಣಲಿಲ್ಲ. ಪ್ರೇಕ್ಷಕರು ಚಿತ್ರಕ್ಕೆ ಫುಲ್‌ ಮಾರ್ಕ್ಸ್‌ ನೀಡಿರಲಿಲ್ಲ. ರಿವ್ಯೂನಲ್ಲಿ ಅತ್ಯಂತ ಕಡಿಮೆ  ಅಂಕ ಪಡೆದಿದ್ದ ಚಿತ್ರ, ಈವರೆಗೆ ಮಾಡಿದ ಭಾರತೀಯ ಚಿತ್ರಗಳಲ್ಲಿ ಅತ್ಯಂತ ಕೆಟ್ಟ ಚಿತ್ರ ಎಂಬ ಹೆಗ್ಗಳಿಕೆ ಗಳಿಸಿದೆ. ಅದೇ ವರ್ಷ ಬಿಡುಗಡೆಯಾದ ಶುದ್ಧ್ ದೇಸಿ ರೋಮ್ಯಾನ್ಸ್ 27 ಕಿಸ್ಸ್ ಹೊಂದಿತ್ತು. ರಣವೀರ್ ಸಿಂಗ್ ಮತ್ತು ವಾಣಿ ಕಪೂರ್ ನಟಿಸಿದ ಬೇಫಿಕ್ರೆಯಲ್ಲಿ ಕೂಡ 25 ಕಿಸ್‌ ದೃಶ್ಯಗಳಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read