ಉಚ್ಚಾಟತ ಶಾಸಕರಿಗೆ ವಿಧಾನಸಭೆಯಲ್ಲಿ ‘ಬೋಗಸ್’ ಸೀಟು ಹಂಚಿಕೆ

ಬೆಂಗಳೂರು: ವಿಧಾನಸಭೆಯ ಹಿಂಬದಿಯ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಬಿಜೆಪಿಯಿಂದ ಉಚ್ಚಾಟಿತಗೊಂಡಿರುವ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಿರಿಯ ಶಾಸಕರಾಗಿರುವ ನಮಗೆ ವಿಧಾನಸಭೆಯಲ್ಲಿ 224, 225, 226ನೇ ಸಂಖ್ಯೆಯ ಆಸನ ನೀಡಲಾಗಿದೆ. ಆದರೆ, ವಿಧಾನಸಭೆಯಲ್ಲಿ ಇರುವುದೇ 224 ಶಾಸಕರು. 225 ಮತ್ತು 226 ಇಲ್ಲವೇ ಇಲ್ಲ. ಹೀಗಾಗಿ ಎರಡೂ ಸಂಖ್ಯೆಗಳ ಆಸನಗಳು ಬೋಗಸ್ ಆಸನಗಳಾಗಿವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಮೊದಲ ಸಾಲಿನಲ್ಲಿ ಪ್ರತಿಪಕ್ಷ, ಎರಡನೇ ಸಾಲಿನಲ್ಲಿ ಪ್ರಾದೇಶಿಕ ಪಕ್ಷದ ಶಾಸಕರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಶಾಸಕ ಜನಾರ್ದನ ರೆಡ್ಡಿ ಬಿಜೆಪಿಯೊಂದಿಗೆ ಸೇರಿಕೊಂಡಿದ್ದು, ನಮ್ಮನ್ನು ಹೊಂದಾಣಿಕೆ ರಹಿತ ಪಕ್ಷದವರೆಂದು ಪರಿಗಣಿಸಿ ಮುಂದಿನ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read