ಬೆಂಗಳೂರು : ಉಪ್ಪಿ-2 ಚಿತ್ರದಲ್ಲಿ ಉಪೇಂದ್ರ ಜೊತೆ ನಟಿಸಿದ್ದ ಬಾಡಿ ಬಿಲ್ಡರ್ ಅಮೆರಿಕದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.
ಹೌದು, ಅಮೆರಿಕಾದಲ್ಲಿ ನಡೆದ ಅಪಘಾತದಲ್ಲಿ ಕೋಲಾರ ಮೂಲದ ಬಾಡಿ ಬಿಲ್ಡರ್ ಸುರೇಶ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸುರೇಶ್ ಮೂಲತಹ ಕೋಲಾರದ ಗಾಂಧಿ ನಗರ ಬಡಾವಣೆಯವರು. ಅವರು ಬಾಡಿ ಬಿಲ್ಡರ್, ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದರು. ಅಮೆರಿಕಾದಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಪ್ಪಿ -2 ಸೇರಿದಂತೆ ಉಪೇಂದ್ರ ಸೇರಿ ಹಲವು ತಾರೆಯರ ಜೊತೆ ಸುರೇಶ್ ನಟಿಸಿದ್ದರು.