ಚಿಕ್ಕಮಗಳೂರು : ಜಿಲ್ಲೆಯ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ನದಿಗೆ ಬಿದ್ದು ಮೃತಪಟ್ಟಂತಹ ಯುವಕನ ಶವ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ಘಟನೆ ನಡೆದಿತ್ತು, ಕಳೆದ ಗುರುವಾರ ಸಂಜೆ ರವಿಕಲಾ ಪುತ್ರ ಶಮಂತ್ (23) ಪಿಕಪ್ ಓಡಿಸುವಾಗ ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ಪಿಕಪ್ ಸಮೇತ ನದಿಗೆ ಬಿದ್ದಿದ್ದನು. ಆದರೆ ಎಷ್ಟೇ ಹುಡುಕಿದರೂ ಶಮಂತ್ ಮೃತದೇಹ ಸಿಕ್ಕಿರಲಿಲ್ಲ. ಇದೀಗ ಶಮಂತ್ ಮೃತದೇಹ ಪತ್ತೆಯಾಗಿದೆ.
ಶಮಂತ್ ಪಿಕಪ್ ನಲ್ಲಿ ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದೊಯ್ಯತ್ತಿದ್ದನು. ಕಾರ್ಮಿಕರsನ್ನು ತೋಟಕ್ಕೆ ಬಿಟ್ಟು ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ಶಮಂತ್ ಮೃತದೇಹಕ್ಕೆ ಹುಡುಕಾಟ ನಡೆಯುತ್ತಿರುವಾಗಲೇ ಮಗನ ಸಾವಿನಿಂದ ಮನನೊಂದು ಕೆರೆಗೆ ಹಾರಿ ತಾಯಿ ರವಿಕಲಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You Might Also Like
TAGGED:ಭದ್ರಾ ನದಿ