BIG NEWS: 5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ವ್ಯವಸ್ಥೆ ಬದಲಾವಣೆ: ಶಿಕ್ಷಣ ಇಲಾಖೆಯಿಂದ ಪರಿಷ್ಕೃತ ಸುತ್ತೋಲೆ

ಬೆಂಗಳೂರು: 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಗೆ ಶಾಲಾ ಶಿಕ್ಷಣ ಇಲಾಖೆ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.

5 ಮತ್ತು 8ನೇ ತರಗತಿಗೆ ಮಧ್ಯವಾರ್ಷಿಕ ಪರೀಕ್ಷೆ(SA-1) ಮತ್ತು ಮೌಲ್ಯಂಕನ ಸೇರಿ ಫಲಿತಾಂಶ ನೀಡಬೇಕು ಎಂದು ಹೇಳಲಾಗಿದೆ. 9ನೇ ತರಗತಿಗೆ ಅಂತಿಮ ವಾರ್ಷಿಕ ಪರೀಕ್ಷೆಯಲ್ಲಿನ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಬೇಕೆಂದು ಸೂಚಿಸಲಾಗಿದೆ.

5ನೇ ತರಗತಿ ಬೋರ್ಡ್ ಪರೀಕ್ಷೆಗೆ 2023 -24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಲ್ಲಿನ ನವೆಂಬರ್ ನಿಂದ ಫೆಬ್ರವರಿ 2024 ರವರೆಗಿನ ಪಠ್ಯ ವಸ್ತು ಹಾಗೂ ಎಂಟನೇ ತರಗತಿಗೆ 2023ರ ಜೂನ್ ನಿಂದ ಫೆಬ್ರವರಿ 2024ರ ವರೆಗಿನ ಪಠ್ಯ ವಸ್ತು ಪರಿಗಣಿಸಬೇಕೆಂದು ಸೂಚಿಸಲಾಗಿದೆ.

9ನೇ ತರಗತಿಗೆ ಮೌಲ್ಯಂಕನದಲ್ಲಿ ಪ್ರಥಮ ಭಾಷೆ 100 ಅಂಕ, ದ್ವಿತೀಯ, ತೃತೀಯ ಭಾಷೆ, ಕೋರ್ ವಿಷಯಗಳಿಗೆ 80 ಅಂಕಗಳಂತೆ 500 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಬೇಕು. ಅಂತಿಮವಾಗಿ ಆಂತರಿಕ ಮೌಲ್ಯಮಾಪನದ ಅಂಕ, ಎಸ್ಎ-2 ಬದಲಾಗಿ ನಡೆಸುವ ಮೌಲ್ಯಾಂಕನ ಲಿಖಿತ ಪರೀಕ್ಷೆಯ ಅಂಕಗಳನ್ನು ಪರಿಗಣಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read