ಜ. 17 ಬೆಂಗಳೂರಿನಲ್ಲಿ ಟಿ20 ಪಂದ್ಯ ಹಿನ್ನೆಲೆ ಬಿಎಂಟಿಸಿ ಹೆಚ್ಚುವರಿ ಬಸ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನವರಿ 17ರಂದು ಬುಧವಾರ ಭಾರತ -ಅಫ್ಘಾನಿಸ್ತಾನ ತಂಡಗಳ ನಡುವೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯಲಿದೆ.

ಪಂದ್ಯ ವೀಕ್ಷಿಸಲು ಬರುವವರಿಗೆ ಬಿಎಂಟಿಸಿ ವತಿಯಿಂದ ಹೆಚ್ಚುವರಿ ಬಸ್ ಸೇವೆ ಕಲ್ಪಿಸಲಾಗಿದೆ. ಪಂದ್ಯ ಮುಕ್ತಾಯವಾದ ನಂತರ ಕ್ರೀಡಾಂಗಣದಿಂದ ಬೆಂಗಳೂರು ನಗರದ ವಿವಿಧ ಕಡೆಗಳಿಗೆ ತೆರಳುವವರಿಗೆ ತಡರಾತ್ರಿ ಬಸ್ ಗಳು ಸಂಚರಿಸುತ್ತವೆ.

ಕಾಡುಗುಡಿ, ಎಲೆಕ್ಟ್ರಾನಿಕ್ಸ್ ಸಿಟಿ, ಬನ್ನೇರುಘಟ್ಟ, ಕೆಂಗೇರಿ ಕೆಹೆಚ್‌ಬಿ ಬಡಾವಣೆ, ನೆಲಮಂಗಲ, ಯಲಹಂಕ ಐದನೇ ಹಂತ, ಆರ್.ಕೆ. ಹೆಗಡೆ ನಗರಮ ಬಾಗಲೂರು, ಹೊಸಕೋಟೆ ಮಾರ್ಗಗಳಿಗೆ ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ ಎಂದು ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read