ಬೆಂಗಳೂರು: ಇತ್ತೀಚಿನ ದಿನಗಳ ಕಾಡಾನೆಗಳು ನಾಡಿಗೆ ಬಂದು ದಾಳಿ ನಡೆಸುತ್ತಿರುವ ಘಟನೆ ಹೆಚ್ಚುತ್ತಿದೆ. ಕಾಡಾನೆಗಳ ಹಿಂಡೋಂದು ಬಿಎಂಟಿಸಿ ಬಸ್ ಗೆ ಅಡ್ದಟ್ಟಿದ ಘಟನೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ನಡೆದಿದೆ.
ಕನಕಪುರ ರಸ್ತೆಯ ಕಗ್ಗಲೀಪುರ ಬಳಿ ಗುಲ್ಲಹಟ್ಟಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬಿಎಂಟಿಸಿ ಬಸ್ ಗೆ ಅಡ್ದಗಟ್ಟಿದೆ. ಕಂಗಾಲಾದ ಬಸ್ ಚಾಲಕ, ಪ್ರಯಾಣಿಕರು ಜೀವಭಯದಲ್ಲಿ ಕೆಲಕಾಲ ಪರದಾಡಿದ್ದಾರೆ. ರಸ್ತೆ ಮಧ್ಯೆಯೇ ಕಾಡಾನೆಯೊಂದು ಬಸ್ ನ್ನು ಅಡ್ದಗಟ್ಟಿ ನಿಲ್ಲಿಸಿದೆ. ಬಸ್ ಸುತ್ತ ಒಂದು ಸುತ್ತು ಹೊಡೆದಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಉಸಿರು ಬಿಗಿಹಿಡಿದು ಕುಳಿತಿದ್ದಾರೆ.
ಇದೇ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕಾಡಾನೆ ಬಸ್ ನ ಹಿಂಬದಿ ನಿಧಾನವಾಗಿ ಹೆಜ್ಜೆ ಇಡುತ್ತಿದ್ದಂತೆ ಚಾಲಕ ಬಸ್ ಚಲಾಯಿಸಿಕೊಂಡು ಹೋಗಿದ್ದಾರೆ. ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.