ಉತ್ತರ ಪ್ರದೇಶ : ಶಿಕ್ಷಣ ಇಲಾಖೆಯ ಆನ್’ಲೈನ್ ಮೀಟಿಂಗ್’ನಲ್ಲಿ ‘ನೀಲಿ ಚಿತ್ರ’ ಪ್ರಸಾರವಾಗಿದ್ದು, ಅಧಿಕಾರಿಗಳು ತಬ್ಬಿಬ್ಬಾದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮಹಾರಾಜ್ ಗಂಜ್ ಎಂಬಲ್ಲಿ ಈ ಘಟನೆ ನಡೆದಿದೆ. ಆನ್ ಲೈನ್ ಸಭೆ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನೀಲಿ ಚಿತ್ರ ಪ್ರಸಾರವಾಗಿದೆ. ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕೂಡ ಹಾಜರಿದ್ದರು.ಶಿಕ್ಷಣ ಇಲಾಖೆಯ ಆನ್ಲೈನ್ ಸಾರ್ವಜನಿಕ ಸಭೆಯಲ್ಲಿ ಘಟನೆ ನಡೆದಿದೆ.
ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ತಿಳಿದುಕೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಸಭೆ ಕರೆಯಲಾಗಿತ್ತು. ಈ ಸಮಯದಲ್ಲಿ ಗೂಗಲ್ ಮೀಟ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಸಭೆ ವೇಳೆ ಅಶ್ಲೀಲ ವಿಡಿಯೋ ಪ್ಲೇ ಮಾಡಿದರು. ಅಶ್ಲೀಲ ವಿಡಿಯೋ ಫ್ಲೇ ಆಗುತ್ತಿದ್ದಂತೆ ತಕ್ಷಣ ಡಿಎಂ ಅದನ್ನು ನಿಲ್ಲಿಸಿದರು. ಈ ಬಗ್ಗೆ ತನಿಖೆ ನಡೆಸುವಂತೆ ಸೈಬರ್ ಪೊಲೀಸರಿಗೆ ಆದೇಶಿಸಲಾಗಿದೆ.
ಸಭೆಯ ಸಮಯದಲ್ಲಿ, ‘ಜೇಸನ್ ಜೂನಿಯರ್’ ಎಂಬ ಹೆಸರಿನ ಭಾಗವಹಿಸುವ ವ್ಯಕ್ತಿಯೊಬ್ಬರು ತಮ್ಮ ಪರದೆಯನ್ನು ಹಂಚಿಕೊಂಡು ಅಶ್ಲೀಲ ವೀಡಿಯೊವನ್ನು ಪ್ಲೇ ಮಾಡಿದರು, ನಂತರ ಅಧಿಕಾರಿಗಳು ಸಭೆಯಿಂದ ನಿರ್ಗಮಿಸಿದರು.