ಅದೃಷ್ಟವನ್ನೂ ಹೊತ್ತು ತರುತ್ತದೆ ಕಪ್ಪು ಬಣ್ಣ, ಈ 4 ರಾಶಿಯವರಿಗೆ ಸಿಗುತ್ತದೆ ಶುಭಫಲ….!

ಜ್ಯೋತಿಷ್ಯದಲ್ಲಿ ಕಪ್ಪು ಬಣ್ಣವನ್ನು ಅಶುಭವೆಂದು ಪರಿಗಣಿಸಲಾಗಿದೆ. ಆದರೆ ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಕಪ್ಪು ಬಣ್ಣದ ಪರಿಣಾಮವು ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ಕಪ್ಪು ಬಹಳಷ್ಟು ಜನರ ಫೇವರಿಟ್‌ ಕಲರ್‌ ಕೂಡ. ನಾಲ್ಕು ನಿರ್ದಿಷ್ಟ ರಾಶಿಗೆ ಸೇರಿದ ಜನರು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು.

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ನಿಗೂಢ ಸ್ವಭಾವದವರು. ಅದಕ್ಕಾಗಿಯೇ ಕಪ್ಪು ಬಣ್ಣಗಳು ಅವರನ್ನು ಹೆಚ್ಚು ಆಕರ್ಷಿಸುತ್ತವೆ. ಅವರ ವಾರ್ಡ್ ರೋಬ್, ಆಭರಣಗಳು, ಗೃಹಾಲಂಕಾರಗಳು, ಕಾರು ಕೂಡ ಕಪ್ಪು ಬಣ್ಣದಲ್ಲಿರಲಿ ಎಂದು ಇಚ್ಛಿಸುತ್ತಾರೆ. ಕಪ್ಪು ಬಣ್ಣವು ಅವರಿಗೆ ತುಂಬಾ ಮಂಗಳಕರ ಫಲಿತಾಂಶಗಳನ್ನು ತರುತ್ತದೆ.

ಮಕರ ರಾಶಿ: ಮಕರ ರಾಶಿಯವರ ಶಾಸ್ತ್ರೀಯ ಸ್ವಭಾವವು ಕಪ್ಪು ಬಣ್ಣವನ್ನು ತುಂಬಾ ಇಷ್ಟಪಡುತ್ತದೆ. ಕಪ್ಪು ಬಣ್ಣವು ಅವರ ಜೀವನಕ್ಕೆ ಹೆಗ್ಗುರುತು ಇದ್ದಂತೆ. ಕಪ್ಪು ಬಣ್ಣವು ಈ ರಾಶಿಚಕ್ರ ಚಿಹ್ನೆಯ ಜನರಿಗೆ ಪ್ರಗತಿಯ ಅನೇಕ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಆದ್ದರಿಂದ  ಅವರು ಸಾಧ್ಯವಾದಷ್ಟು ಕಪ್ಪು ಬಣ್ಣವನ್ನು ಬಳಸಬೇಕು.

ಮೀನ ರಾಶಿ: ಮೀನ ರಾಶಿಯ ಜನರು ಕಪ್ಪು ಬಣ್ಣದೊಂದಿಗೆ ಭಾವನಾತ್ಮಕ ಸಂಭಂಧ ಹೊಂದಿರುತ್ತಾರೆ. ಈ ಬಣ್ಣವು ಒಬ್ಬರ ಅಭಿಪ್ರಾಯಗಳನ್ನು ಇತರರ ಮುಂದೆ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿಸುತ್ತದೆ. ಕಪ್ಪು ಬಣ್ಣವು ಈ ರಾಶಿಚಕ್ರ ಚಿಹ್ನೆಯ ಜನರ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ, ಇದು ಅವರಿಗೆ ಮಂಗಳಕರವಾಗಿದೆ.

ಕುಂಭ ರಾಶಿ : ಈ ರಾಶಿಚಕ್ರ ಚಿಹ್ನೆಯ ಜನರು ಬಂಡಾಯ ಮನೋಭಾವವನ್ನು ಹೊಂದಿರುತ್ತಾರೆ. ಈ ಕಾರಣದಿಂದಲೇ ಅವರು ಕಪ್ಪು ಬಣ್ಣದ ಮೂಲಕ ತಮ್ಮ ಅಭಿಪ್ರಾಯಗಳನ್ನು ಇತರರಿಗೆ ಪ್ರಸ್ತುತಪಡಿಸುತ್ತಾರೆ. ತಮ್ಮದೇ ಅಸ್ತಿತ್ವವನ್ನು ಹೊಂದುತ್ತಾರೆ. ಇವರು ಕಪ್ಪು ಬಣ್ಣದ ಬಟ್ಟೆ ಮತ್ತಿತರ ವಸ್ತುಗಳನ್ನು ಬಳಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read