BIG NEWS: ಕ್ಯಾಮರಾ ಇದ್ದಿದ್ದರೆ ಹಾಗೇ ಹೇಳುತ್ತಲೇ ಇರಲಿಲ್ಲ; ಕಾದು ನೋಡಿ ಮುಂದೆ ಏನಾಗಲಿದೆ ಎಂದು… ಮಾರ್ಮಿಕವಾಗಿ ನುಡಿದ ಬಿ.ಕೆ.ಹರಿಪ್ರಸಾದ್

ಬೆಂಗಳೂರು: ’ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತ’ ಎಂಬ ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಬಿ.ಕೆ.ಹರಿಪ್ರಸಾದ್ ತಮ್ಮ ಹೇಳಿಕೆ ಹಾಗೂ ಸಿಎಂ ವಿರುದ್ಧ ಅಸಮಾಧಾನದ ಬಗ್ಗೆ ಒಪ್ಪಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನವಿರುವುದು ನಿಜ. ಸ್ವಲ್ಪ ಕಾದು ನೋಡಿ. ರಾಜಕಾರಣದಲ್ಲಿ ಮುಂದೆ ಏನೆಲ್ಲ ಆಗಲಿದೆ ಎಂಬುದನ್ನು ಎಂದು ಮಾರ್ಮಿಕವಾಗಿ ನುಡಿದರು.

ಇದೇ ವೇಳೆ ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತು ಎಂಬ ಹೇಳಿಕೆ ವಿಚಾರವಾಗಿ, ನನ್ನ ಹೇಳಿಕೆ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ಕೊಡಲ್ಲ. ಹೇಳಿದ ಮೇಲೆ ಅದನ್ನು ವಾಪಸ್ ತೆಗೆದುಕೊಳ್ಳುವ ಜಾಯಮಾನ ನನ್ನದಲ್ಲ. ಹೇಳಿದಿನಿ ಅಂದ್ರೆ ಹೇಳಿದಿ ಅಷ್ಟೇ ಎಂದು ಹೇಳಿದ್ದಾರೆ.

ನಾನು ಮಾತನಾಡುವ ಮೊದಲು ಯೋಚಿಸಿ ಮಾತನಾಡುತ್ತೇನೆ. ಅಲ್ಲಿ ಕ್ಯಾಮರಾ ಇರ್ಲಿಲ್ಲ. ಹಾಗಾಗಿ ನಾನು ಮಾತನಾಡಿದ್ದೆ. ಕ್ಯಾಮರಾ ಇದೆ ಎಂದಾದರೆ ಹೆಚ್ಚು ಮಾತನಾಡುತ್ತಿರಲಿಲ್ಲ. ಯಾರೋ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಕ್ಯಾಮರಾ ಇದ್ದಾಗ ಎಷ್ಟು ಮಾತನಾಡಬೇಕೋ ಅಷ್ಟೇ ಮಾತನಾಡುತ್ತೇವೆ. ಈಗ ಹೆಳಿರುವುದರ ಬಗ್ಗೆ ಹೆಚ್ಚೇನು ಮಾತನಾಡಲ್ಲ, ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇನೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read