BIG NEWS: ಅಭಿವೃದ್ಧಿ ಇಲ್ಲವೇ ಇಲ್ಲ-ಮಚ್ಚು, ಲಾಂಗು ತಲ್ವಾರ್‌ಗಳೇ ಎಲ್ಲಾ: ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ಉಡುಪಿ ಗ್ಯಾಂಗ್ ವಾರ್ ಬೆನ್ನಲ್ಲೇ ಕೋಲಾರದಲ್ಲಿಯೂ ಯುವಕನೊಬ್ಬ ತಲ್ವಾರ್ ಹಿಡಿದು ಜನರಲ್ಲಿ ಭಯ ಹುಟ್ಟಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದೀಗ ಈ ಪ್ರಕರಣಗಳನ್ನು ಮುಂದಿಟ್ಟು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಅಭಿವೃದ್ಧಿ ಇಲ್ಲವೇ ಇಲ್ಲ – ಮಚ್ಚು, ಲಾಂಗು ತಲ್ವಾರ್‌ಗಳೇ ಎಲ್ಲಾ!! ಇದು ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಆಡಳಿತದ ಅಸಲಿ ಸಾಧನೆ ಎಂದು ಅಕ್ರೋಶ ವ್ಯಕ್ತಪಡಿಸಿದೆ.

ಮಚ್ಚು, ಲಾಂಗು, ತಲ್ವಾರ್‌ಗಳನ್ನು ಪ್ರದರ್ಶಿಸಿದವರನ್ನು ಕಾಂಗ್ರೆಸ್ಸಿಗರು ಮನೆ ಮಕ್ಕಳಂತೆ ಮುದ್ದಿಸಿದ ಕಾರಣ, ರಾಜ್ಯಾದ್ಯಂತ ದಿನೇ ದಿನೇ ಮಚ್ಚು, ಲಾಂಗು ಮುಂತಾದ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವವರ ಸಂಖ್ಯೆ ಹೆಚ್ಚಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಅತಿಯಾದ ಓಲೈಕೆ ರಾಜಕಾರಣವು ಕರ್ನಾಟಕದ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿದ್ದು ಮಾತ್ರವಲ್ಲದೆ, ಕನ್ನಡಿಗರ ನೆಮ್ಮದಿಗೂ ಸಹ ಕೊಳ್ಳಿ ಇಟ್ಟಿದೆ ಎಂದು ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read