‘ಶಕ್ತಿ ಯೋಜನೆ’ಯಿಂದ ಖಾಸಗಿ ಸಾರಿಗೆ ವ್ಯವಸ್ಥೆಯೇ ಅಯೋಮಯ : ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಬೆಂಗಳೂರು : ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ವ್ಯವಸ್ಥೆಯೇ ಅಯೋಮಯವಾಗಿದೆ ಎಂದು ಕಾಂಗ್ರೆಸ್ ಗೆ ಬಿಜೆಪಿ ಟಾಂಗ್ ನೀಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಾಸ್ತವಿಕ ಶಕ್ತಿ ಯೋಜನೆಯಿಂದಾಗಿ ಖಾಸಗಿ ಸಾರಿಗೆ ವ್ಯವಸ್ಥೆ ಅಯೋಮಯವಾಗಿದೆ. ಖಾಸಗಿ ಆಟೋ, ಟ್ಯಾಕ್ಸಿ, ಬಸ್ ಚಾಲಕರ ಬದುಕನ್ನೇ ಕಿತ್ತುಕೊಂಡು ಬೀದಿ ಪಾಲು ಮಾಡಲಾಗಿದೆ ಎಂದಿದೆ.

ಕಳೆದ ಮೂರು ತಿಂಗಳಿಂದ ಖಾಸಗಿ ಸಾರಿಗೆ ಸಂಘಗಳುಸಿದ್ದರಾಮಯ್ಯ ಅವರ ಸರ್ಕಾರವನ್ನು ಎಚ್ಚರಿಸಿಕೊಂಡು ಬಂದಿದ್ದರೂ ಮೊಂಡಾಟವಾಡುವುದನ್ನು ಬಿಡಲಿಲ್ಲ. ಪರಿಣಾಮ ಇಂದು ಕರ್ನಾಟಕ ಬಂದ್ನಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಬೇಡಿಕೆ ಈಡೇರಿಸಲು 360 ಕೋಟಿ ಬೇಕಿದೆ ನಮ್ಮಲ್ಲಿ ಹಣವಿಲ್ಲ ಎನ್ನುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೇ, ತುಷ್ಟೀಕರಣ ರಾಜಕೀಯಕ್ಕಾಗಿ, ಗಾಂಧಿ ಕುಟುಂಬದ ಒಲೈಕೆಗಾಗಿ ನೂರಾರು ಕೋಟಿ ಹಣವನ್ನು ಪೋಲು ಮಾಡುತ್ತಿದ್ದೀರಿ. ರಾಜ್ಯದ ಹಿತಕ್ಕಿಂತಲೂ ನಿಮಗೆ ರಾಜೀವ್ ಗಾಂಧಿಯವರ ಪ್ರತಿಮೆಯೇ ಮೇಲಾಯಿತು ಎಂದು ಬಿಜೆಪಿ ಟ್ವೀಟ್ ನಲ್ಲಿ ಕಿಡಿಕಾರಿದೆ.

https://twitter.com/BJP4Karnataka/status/1701095898388758541

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read