ಮೋಸದ ಗ್ಯಾರಂಟಿ ತೋರಿಸಿ ಜನರನ್ನು ವಂಚಿಸಿದ ಕಾಂಗ್ರೆಸ್ ನೀತಿಗಳು ರಾಜ್ಯಕ್ಕೆ ಮಾರಕವಾಗಿದೆ : ಬಿಜೆಪಿ ವಾಗ್ಧಾಳಿ

ಬೆಂಗಳೂರು : ಮೋಸದ ಗ್ಯಾರಂಟಿ ತೋರಿಸಿ ಜನರನ್ನು ವಂಚಿಸಿದ ಕಾಂಗ್ರೆಸ್ ನೀತಿಗಳು ರಾಜ್ಯಕ್ಕೆ ಮಾರಕವಾಗಿದೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.

ಮೋಸದ ಗ್ಯಾರಂಟಿ ತೋರಿಸಿ ಜನರನ್ನು ವಂಚಿಸಿ ಅಧಿಕಾರ ಹಿಡಿದ ಕಾಂಗ್ರೆಸ್ ನೀತಿಗಳು ಈಗ ರಾಜ್ಯಕ್ಕೇ ಮಾರಕವಾಗಿದೆ. 200 ಯುನಿಟ್ ಉಚಿತ ವಿದ್ಯುತ್ ಎಂದು ಇದೀಗ ಸ್ಪಷ್ಟತೆಯಿಲ್ಲದೆ ಇಳಿಸಿದ್ದೂ ಅಲ್ಲದೆ ವಿದ್ಯುತ್ ದರ ಏರಿಕೆಯ ಬಿಸಿ ನಾಗರೀಕರನ್ನು ಬೆಚ್ಚಿ ಬೀಳಿಸಿದೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಗುಳೇ ಹೋಗುವಂತೆ ಮಾಡಿದೆ. ಇನ್ನೊಂದೆಡೆ ಪೂರ್ವಸಿದ್ಧತೆಯಿಲ್ಲದೆ, ಸಾರಿಗೆ ಸೇವೆ ನೀಡಿ ಬದುಕು ಸಾಗಿಸುತ್ತಿರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಶಕ್ತಿ ಯೋಜನೆಯ ಯೋಚನಾರಹಿತ ಅನುಷ್ಠಾನದ ಮೂಲಕ ಅವರನ್ನು ನಿಶ್ಯಕ್ತರನ್ನಾಗಿಸಿದೆ. ಹಿಟ್ಲರ್ ಸರ್ಕಾರ ಎಂದು ಜನ ಕರೆಯುತ್ತಿರುವುದು ಇದೇ ಅಂದಾದುಂಧಿ ಆಡಳಿತದ ಕಾರಣಕ್ಕೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.

https://twitter.com/BJP4Karnataka/status/1668483733136248832?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read