BREAKING: ನ. 7ರಂದು ‘ವಂದೇ ಮಾತರಂ’150ನೇ ವಾರ್ಷಿಕೋತ್ಸವ: ದೇಶಾದ್ಯಂತ 150 ಸ್ಥಳಗಳಲ್ಲಿ ಕಾರ್ಯಕ್ರಮ ಆಚರಿಸಲು ಬಿಜೆಪಿ ನಿರ್ಧಾರ: ದೆಹಲಿಯಲ್ಲಿ ಮೋದಿ ಭಾಗಿ

ನವದೆಹಲಿ: ದೇಶಭಕ್ತಿ ಗೀತೆ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಬಿಜೆಪಿ ಶುಕ್ರವಾರ ದೇಶಾದ್ಯಂತ 150 ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.

ನವದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ರಾಷ್ಟ್ರೀಯ ಗೀತೆ ವಂದೇ ಮಾತರಂನ 150ನೇ ವರ್ಷಾಚರಣೆಯನ್ನು ಉತ್ಸವವಾಗಿ ಆಚರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ ಎಂದು ಘೋಷಿಸಿದರು.

ಈ ತಿಂಗಳ 26 ರಂದು ಆಚರಿಸಲಾಗುವ ಸಂವಿಧಾನ ದಿನದವರೆಗೆ ಪಕ್ಷವು ವಿವಿಧ ವಂದೇ ಮಾತರಂ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ವಂದೇ ಮಾತರಂ ಗೀತೆಯು ರಾಷ್ಟ್ರೀಯತೆ, ಏಕತೆ ಮತ್ತು ಬ್ರಿಟಿಷ್ ಆಡಳಿತದ ವಿರುದ್ಧದ ಪ್ರತಿರೋಧದ ಸಾಮೂಹಿಕ ಮನೋಭಾವದ ಸ್ಪೂರ್ತಿದಾಯಕ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.

ನವೆಂಬರ್ 7 ರಂದು 150 ಸ್ಥಳಗಳಲ್ಲಿ ‘ವಂದೇ ಮಾತರಂ’ನ 150ನೇ ವರ್ಷಾಚರಣೆ ನಡೆಯಲಿದೆ. ದೇಶದಾದ್ಯಂತ 150 ಮಹತ್ವದ ಸ್ಥಳಗಳಲ್ಲಿ ಯೋಜಿಸಲಾದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಅನ್ನು ಸಾಮೂಹಿಕವಾಗಿ ಹಾಡಲಾಗುವುದು: ನವೆಂಬರ್ 7 ರಂದು ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ನವೆಂಬರ್ 7 ರಿಂದ 26 ರವರೆಗೆ(ಸಂವಿಧಾನ ದಿನ) ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ನವೆಂಬರ್ 7 ರಂದು 150 ಮಹತ್ವದ ಸ್ಥಳಗಳಲ್ಲಿ ವಂದೇ ಮಾತರಂ ಹಾಡಲಾಗುವುದು, ನಂತರ ಸ್ಥಳೀಯ ಉತ್ಪನ್ನಗಳನ್ನು ಬಳಸುವ ಪ್ರತಿಜ್ಞೆ ಮಾಡಲಾಗುವುದು ಎಂದು ಚುಗ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read