ಐವರು ಹೊಸಬರು ಸೇರಿ 8 ಮಹಿಳೆಯರಿಗೆ ಬಿಜೆಪಿ ಟಿಕೆಟ್: ಹೊಸದಾಗಿ ಎಂಎಲ್ಎ ಚುನಾವಣೆಗೆ ಸ್ಪರ್ಧಿಸುತ್ತಿರುವ ಮಹಿಳೆಯರಿವರು

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, 8 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.

8 ಮಹಿಳೆಯರಲ್ಲಿ ಐವರು ಹೊಸದಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಸುಳ್ಯ ಕ್ಷೇತ್ರದಿಂದ ಭಾಗೀರಥಿ ಮರುಳ್ಯ, ಪುತ್ತೂರು ಕ್ಷೇತ್ರದಿಂದ ಆಶಾ ತಿಮ್ಮಪ್ಪ, ನಾಗಮಂಗಲದಿಂದ ಸುಧಾ ಶಿವರಾಂ, ಸಂಡೂರು ಕ್ಷೇತ್ರದಿಂದ ಶಿಲ್ಪಾ ರಾಘವೇಂದ್ರ, ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ರತ್ನಾ ಮಾಮನಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ.

ಹಾಲಿ ಶಾಸಕಿಯರಾದ ಪೂರ್ಣಿಮಾ ಹಿರಿಯೂರು ಕ್ಷೇತ್ರದಿಂದ, ರೂಪಾಲಿ ನಾಯ್ಕ್ ಕಾರವಾರದಿಂದ, ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ನಿಪ್ಪಾಣಿ ಕ್ಷೇತ್ರದ ಟಿಕೆಟ್ ದೊರೆತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read