ಜಾತಿ ನಿಂದಕ – ಮಹಿಳಾ ಪೀಡಕ ಮುನಿರತ್ನ ಬೆನ್ನಿಗೆ ನಿಂತ ಬಿಜೆಪಿ; ದಿನೇಶ್‌ ಗುಂಡೂರಾವ್‌ ಆರೋಪ

ಇತ್ತೀಚೆಗೆ ಶಾಸಕ ಮುನಿರತ್ನ ವ್ಯಕ್ತಿಯೊಬ್ಬರೊಂದಿಗೆ ಫೋನ್‌ ನಲ್ಲಿ ಮಾತನಾಡುವಾಗ ಅಶ್ಲೀಲ ಮಾತುಗಳನ್ನಾಡಿ ಜಾತಿ ನಿಂದನೆ ಮಾಡಿದ್ದು, ಎಫ್‌ ಎಸ್‌ ಎಲ್‌ ವರದಿಯಲ್ಲಿ ಈ ಸಂಭಾಷಣೆ ಮುನಿರತ್ನ ಅವರದ್ದೇ ಎಂಬುದಾಗಿ ಸಾಬೀತಾಗಿದೆ.

ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿರುವ ಸಚಿವ ದಿನೇಶ್‌ ಗುಂಡೂರಾವ್‌, ಒಕ್ಕಲಿಗ ಸಮುದಾಯದ ವಿರುದ್ಧ ಬಿಜೆಪಿ ಶಾಸಕ Munirathna ಜಾತಿ ನಿಂದನೆ ಮಾಡಿರುವುದು ಈಗ ಎಸ್ ಐ ಟಿ ಗೆ ದೊರಕಿರುವ ಎಫ್‌ಎಸ್‌ಎಲ್‌ ವರದಿಯಲ್ಲಿ ಸಾಬೀತಾಗಿದೆ. ಮುನಿರತ್ನ ಒಕ್ಕಲಿಗ ಸಮುದಾಯದ ಕುರಿತು ಕೀಳಾಗಿ ಮಾತನಾಡಿರುವುದಷ್ಟೇ ಅಲ್ಲ, ಆ ಸಮುದಾಯದ ಹೆಣ್ಣುಮಕ್ಕಳ ಬಗ್ಗೆಯೂ ನಾಲಿಗೆ ಹರಿಬಿಟ್ಟಿದ್ದಾರೆ.

ಬಿಜೆಪಿ ಶಾಸಕ ಮುನಿರತ್ನ ಜಾತಿ ನಿಂದಕರಷ್ಟೇ ಅಲ್ಲ ಮಹಿಳಾ ಪೀಡಕರೂ ಹೌದು ಎಂಬುದು ಈಗ ಸಾಬೀತಾಗಿದೆ. ಈ ಸತ್ಯ ಗೊತ್ತಿದ್ದರೂ ಬಿಜೆಪಿ ಪಕ್ಷ ಮುನಿರತ್ನ ಅವರ ಬೆನ್ನಿಗೆ ನಿಂತಿದೆ. ಈ ಮೂಲಕ ಬಿಜೆಪಿಯು ಸ್ವಭಾವತಃ ಮಹಿಳಾ ವಿರೋಧಿ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಹಿಂದೂ ನಾವೆಲ್ಲ ಒಂದು ಎನ್ನುವ ಬಿಜೆಪಿ ನಾಯಕರು ಇತರ ಜಾತಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಮುನಿರತ್ನ ಪ್ರಕರಣವೇ ಸಾಕ್ಷಿ. ಇನ್ನು ಅತ್ಯಾಚಾರಿಗಳನ್ನು, ಮಹಿಳಾ ಪೀಡಕರನ್ನು ತಮ್ಮ ಪಕ್ಷದಲ್ಲಿಯೇ ಇಟ್ಟುಕೊಂಡು ‘ಭೇಟಿ ಬಚಾವೋ, ಭೇಟಿ ಪಡಾವೋ’ ಎನ್ನುವ ನರೇಂದ್ರ ಮೋದಿಯವರ ಘೋಷಣೆ ಹಾಸ್ಯಾಸ್ಪದವಾಗಿ ಕಾಣುತ್ತದೆ. ವಾಸ್ತವವಾಗಿ ಬಿಜೆಪಿ ಮತ್ತು ಬಿಜೆಪಿ ನಾಯಕರಿಂದ ರಾಜ್ಯದ ಹೆಣ್ಣುಮಕ್ಕಳಿಗೆ ರಕ್ಷಣೆ ಸಿಗಬೇಕಿದೆ.

ಮುನಿರತ್ನ ಕುರಿತು ಬಿಜೆಪಿ ನಾಯಕರು ತುಟಿ ಬಿಚ್ಚಬೇಕು. ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಈ ಮೂಲಕ ತಮ್ಮ ಬಿಜೆಪಿ ಪಕ್ಷದ ನಿಲುವನ್ನು ಕರ್ನಾಟಕದ ಜನತೆಗೆ ತೋರ್ಪಡಿಸಬೇಕು. ಈ ದಮ್ಮು, ತಾಕತ್ತು ರಾಜ್ಯ ಬಿಜೆಪಿ ಪಕ್ಷಕ್ಕಿದೆಯೇ ? ಎಂದು ಪ್ರಶ್ನಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read