BIG NEWS: 73 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ: ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳಿಂದಲೇ ಅಸಂವಿಧಾನಿಕ ಕ್ರಮ; ವಿಪಕ್ಷ ನಾಯಕ ಆರ್.ಅಶೋಕ್ ಆರೋಪ

ಬೆಂಗಳೂರು: ಕಾಂಗ್ರೆಸ್ ಅತೃಪ್ತ ಶಾಸಕ ಅಸಮಾಧಾನ ಶಮನ ಮಾಡಲು ಬೇಕಾ ಬಿಟ್ಟಿಯಾಗಿ ಎಲ್ಲಾ ಶಾಸಕರಿಗೂ ಗೂಟದ ಕಾರು ನೀಡಲಾಗುತ್ತಿದೆ. ಈ ಮೂಲ ಸಿಎಂ ಸಿದ್ದರಾಮಯ್ಯನವರೇ ಕಾನೂನು ಗಾಳಿಗೆ ತೂರುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

‘ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ’ ಎಂಬಂತೆ ರೈತರ ಬರ ಪರಿಹಾರಕ್ಕೆ, ಅಭಿವೃದ್ಧಿಗೆ ಹಣವಿಲ್ಲದಿರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ 73 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಜನರ ತೆರಿಗೆ ಹಣ ಪೋಲು ಮಾಡುತ್ತಿದೆ. 135 ಶಾಸಕರಲ್ಲಿ 34 ಸಚಿವರು, ನಿಗಮ ಮಂಡಳಿಗಳ ಅಧ್ಯಕ್ಷರು, ಸಲಹೆಗಾರರು, ದೆಹಲಿ ಪ್ರತಿನಿಧಿ ಸೇರಿದಂತೆ ಈಗ ಒಟ್ಟು 73 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಲಾಗಿದ್ದು, ಗ್ಯಾರಂಟಿ ಜಾರಿ ಸಮಿತಿಯ 10 ಮಂದಿಗೂ ಸಂಪುಟ ದರ್ಜೆ ಸ್ಥಾನ ನೀಡಿದರೆ 80ಕ್ಕೂ ಹೆಚ್ಚು ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಿದಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಅತೃಪ್ತ ಶಾಸಕರ ಬಂಡಾಯ ಶಮನ ಮಾಡಲಾಗದ ದುರ್ಬಲ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಕುರ್ಚಿ ಉಳಿಸಿಕೊಳ್ಳಲು ಬೇಕಾಬಿಟ್ಟಿಯಾಗಿ ಎಲ್ಲರಿಗೂ ಗೂಟದ ಕಾರು ನೀಡಿ ಸಮಾಧಾನ ಮಾಡುವ ಕಸರತ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಶಾಸನಸಭೆಯ ಒಟ್ಟು ಸದಸ್ಯ ಬಲದ 15%ರಷ್ಟು ಮಂದಿಗೆ ಮಾತ್ರ ಸಂಪುಟ ಸ್ಥಾನ ನೀಡಬಹುದು ಎಂಬ ಕಾನೂನನ್ನ ಗಾಳಿಗೆ ತೂರಿ ಮಾಡುತ್ತಿರುವ ಈ ನೇಮಕಗಳು ಅಸಂವಿಧಾನಿಕವಾಗಿದ್ದು ಇದನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read