ಜೈಪುರ: ಬಿಜೆಪಿ ಶಾಸಕಿ ದೀಪ್ತಿ ಕಿರಣ್ ಕಾರು ಅಪಘಾತಕ್ಕೀಡಾಗಿದ್ದು, ಶಾಸಕಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಉದಯಪುರ-ರಾಜ್ಸ್ ಮಂದರ್ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಶಾಸಕಿ ದೀಪ್ತಿ ಕಿರಣ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ದೀಪ್ತಿಯವರ ಪಕ್ಕೆಲುಬು ಮುರಿದಿದೆ. ಸದ್ಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದೀಪ್ತಿ ಅವರ ಆಪ್ತಸಹಾಯಕ ಮತ್ತು ಕಾರು ಚಾಲಕರಿಗೂ ಗಾಯಗಳಾಗಿವೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕರ ಕಾರಿಗೆ ಗುಜರಾತ್ ನೋಂದಣಿಯುಳ್ಳ ವಾಹನವೊಂದು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.