Video: ಚುನಾವಣಾ ರ್ಯಾಲಿಯಲ್ಲಿ ಚೇರ್‌ ಎಸೆತ; ಸ್ವಲ್ಪದರಲ್ಲಿ ಅಪಾಯದಿಂದ ಪಾರಾದ ಬಿಜೆಪಿ ನಾಯಕಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಮರಾವತಿಯ ಮಾಜಿ ಸಂಸದೆ ಹಾಗೂ ಬಿಜೆಪಿ ನಾಯಕಿ ನವನೀತ್ ರಾಣಾ, ಶನಿವಾರದಂದು ಅಮರಾವತಿಯ ದರ್ಯಾಪುರ ತಾಲೂಕಿನಲ್ಲಿ ನಡೆಸಿದ ಚುನಾವಣಾ ಪ್ರಚಾರದ ವೇಳೆ ಗಲಾಟೆ ನಡೆದಿದ್ದು, ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ವರದಿಗಳ ಪ್ರಕಾರ, ನವನೀತ್ ರಾಣಾ ಬಿಜೆಪಿ ಅಭ್ಯರ್ಥಿ ಅರುಣ್ ಬಂಡಿಲೆ ಪರ ಪ್ರಚಾರ ಮಾಡುತ್ತಿದ್ದಾಗ ಅವರ ರ್ಯಾಲಿಗೆ ಅಡ್ಡಿಪಡಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನವನೀತ್ ರಾಣಾ ಮೇಲೆ ಕುರ್ಚಿಗಳನ್ನು ಎಸೆಯಲಾಗಿದೆ.

ನವನೀತ್ ರಾಣಾ ತಮ್ಮ ಪಕ್ಷದ ಅಭ್ಯರ್ಥಿ ಅರುಣ್ ಬಂಡಿಲೆ ಅವರ ಪರ ಪ್ರಚಾರ ನಡೆಸುತ್ತಿದ್ದಾಗ ರ್ಯಾಲಿಗೆ ಅಡ್ಡಿಯುಂಟಾಗಿದೆ. ಸಭೆಯ ಮೇಲೆ ಹೊರಗಿನವರು ದಾಳಿ ನಡೆಸಿ, ಕುರ್ಚಿಗಳನ್ನು ಎಸೆದು ಗೊಂದಲ ಉಂಟು ಮಾಡಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.

ವರದಿಗಳ ಪ್ರಕಾರ, ಅಕ್ಟೋಬರ್‌ನಲ್ಲಿ ಮಾಜಿ ಸಂಸದೆ ನವನೀತ್ ರಾಣಾ ಅವರಿಗೆ ₹10 ಕೋಟಿ ನೀಡುವಂತೆ ಬೆದರಿಕೆ ಪತ್ರ ಬಂದಿತ್ತು. ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಮರಾವತಿಯ ಮಾಜಿ ಸಂಸದರು ಹಣದ ಬೇಡಿಕೆಯನ್ನು ಸಲ್ಲಿಸಿದ ಅಮೀರ್ ಎಂಬ ವ್ಯಕ್ತಿಯಿಂದ ಸ್ಪೀಡ್ ಪೋಸ್ಟ್ ಮೂಲಕ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ರಾಣಾ ಅವರ ಆಪ್ತ ಕಾರ್ಯದರ್ಶಿ ವಿನೋದ್ ಗುಹೆ ಅವರು ಅಮರಾವತಿಯ ರಾಜಪೇತ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದು, ಅಕ್ಟೋಬರ್ 11 ರಂದು ರಾಣಾ ಅವರ ನಿವಾಸದಲ್ಲಿ ಉದ್ಯೋಗಿಯೊಬ್ಬರಿಗೆ ಪತ್ರವನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

“ಶನಿವಾರ ರಾತ್ರಿ, ಮಾಜಿ ಸಂಸದೆ ನವನೀತ್ ರಾಣಾ ಅವರನ್ನು ಗುರಿಯಾಗಿಸಿ ರಮೇಶ ಬಂಡಿಲೆ ಅವರ ಸಭೆಯಲ್ಲಿ ಕೆಲವು ವ್ಯಕ್ತಿಗಳು ಗಲಾಟೆ ಮಾಡಿದ್ದರು, ಅವರ ದೂರಿನ ಆಧಾರದ ಮೇಲೆ ತಡರಾತ್ರಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ, ಮತ್ತು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಾಗರಿಕರು. ಶಾಂತಿ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read