ಭಾರತೀಯ ಕ್ರಿಕೆಟ್ ಆಟಗಾರರಿಗೆ ಭರ್ಜರಿ ಆಫರ್: ವಿಶ್ವಕಪ್ ಗೆದ್ದರೆ ತಲಾ ಒಂದು ಸೈಟ್: ಬಿಜೆಪಿ ನಾಯಕ ಘೋಷಣೆ

ರಾಜಕೋಟ್: 2023 ರ ಏಕದಿನ ಕ್ರಿಕೆಟ್ ವಿಶ್ವಕಪ್‌ ಫೈನಲ್ ಪಂದ್ಯ ನಾಳೆ ನಡೆಯಲಿದೆ. ಭಾರತೀಯ ಆಟಗಾರರನ್ನು ಪ್ರೋತ್ಸಾಹಿಸಲು ಅಭಿಮಾನಿಗಳು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಬಿಜೆಪಿ ಮುಖಂಡರೊಬ್ಬರು ದೊಡ್ಡ ಘೋಷಣೆ ಮಾಡಿದ್ದಾರೆ. ಭಾರತ ತಂಡ ಜಯಗಳಿಸಿದ್ದಲ್ಲಿ ಪ್ರತಿ ಆಟಗಾರನಿಗೆ ಒಂದೊಂದು ನಿವೇಶನ ನೀಡುವುದಾಗಿ ಬಿಜೆಪಿ ಮುಖಂಡ ಕೆಯೂರ್ ಧೋಲೋರಿಯಾ ಹೇಳಿದ್ದಾರೆ.

ರಾಜಕೋಟ್ ತಾಲೂಕಿನ ಸರಪಂಚ್ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಧೋಲಾರಿಯಾ ಭಾರತ ತಂಡ ಗೆದ್ದಲ್ಲಿ ಪ್ರತಿ ಆಟಗಾರನಿಗೆ ನಿವೇಶನ ನೀಡಲಾಗುವುದು. ಭಾರತ ತಂಡದ 15 ಆಟಗಾರರು ಕೋಚ್ ಸೇರಿ 16 ಮಂದಿಗೆ ನಿವೇಶನ ನೀಡಲಾಗುವುದು. ಈ ನಿವೇಶನಗಳು ರಾಜ್ಕೋಟ್ ಸಮೀಪದ ಲೋಥ್ರಾ ಇಂಡಸ್ಟ್ರಿಸ್ ವಲಯದ 50 ಎಕರೆ ಪ್ರದೇಶದಲ್ಲಿ ಶಿವಂ ಇಂಡಸ್ಟ್ರೀಸ್ ನಲ್ಲಿ ಲಭ್ಯವಿದೆ. ಒಂದು ನಿವೇಶನದ ಬೆಲೆ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಕ್ರಿಕೆಟಿಗರು ಈ ನಿವೇಶನಗಳನ್ನು ಅವರ ಕುಟುಂಬ ಸದಸ್ಯರಿಗೆ ವರ್ಗಾಯಿಸಲು ಬಯಸಿದಲ್ಲಿ ಅದಕ್ಕೂ ಅವಕಾಶ ಮಾಡಿಕೊಡುತ್ತೇವೆ. ಕೈಗಾರಿಕಾ ಪ್ರದೇಶದಲ್ಲಿ 230 ಪ್ಲಾಟ್ ಗಳಿದ್ದು, ಆಟಗಾರರಿಗೆ 16 ಫ್ಲಾಟ್ ಗಳನ್ನು ಕಾಯ್ದಿರಿಸಿದ್ದೇವೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read