ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಪಾವತಿಸಿದ್ದ ಶುಲ್ಕವನ್ನೂ ಗುಳುಂ ಮಾಡಿದ ಸರ್ಕಾರ; ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತೊಂದು ಆರೋಪ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ವಿದ್ಯಾರ್ಥಿಗಳ ಶುಲ್ಕವನ್ನೂ ಲಪಟಾಯಿಸಿದೆ ಎಂದು ಕಿಡಿಕಾರಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಸ್ಕ್ಯಾಮ್ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಎಷ್ಟು ಬರಗೆಟ್ಟಿದೆ ಅಂದರೆ, ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಪಾವತಿಸಿದ್ದ ಸುಮಾರು 2.66 ಕೋಟಿ ರೂ. ಶುಲ್ಕವನ್ನೂ ಗುಳುಂ ಮಾಡಿದೆ. ಈ ಪರೀಕ್ಷೆ ರದ್ದಾಗಿದ್ದರೂ ಹಣವನ್ನು ಮರುಪಾವತಿ ಮಾಡದೇ ಪೋಷಕರನ್ನು ಆಟವಾಡಿಸುತ್ತಿದೆ ಎಂದು ಗುಡುಗಿದೆ.

‘ಕೈ’ ಸಂಪೂರ್ಣ ಖಾಲಿ ಮಾಡಿಕೊಂಡಿರುವ ಮುಖ್ಯಮಂತ್ರಿಗಳಿಗೆ ಬಡಮಕ್ಕಳ ಶುಲ್ಕವನ್ನು ಲಪಟಾಯಿಸುವ ದುರ್ಬುದ್ದಿ ಬರಬಾರದಿತ್ತು. ಪೋಷಕರು ಇದನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read