ರಾಜ್ಯದ ಕಾಂಗ್ರೆಸ್ ನಾಯಕರಿಗೆ ದೆಹಲಿ ಕಚೇರಿಯಲ್ಲಿ ನೋ ಎಂಟ್ರಿ: ಹೈಕಮಾಂಡ್ ಕಚೇರಿಯಲ್ಲಿ ಕೈ ನಾಯಕರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಬಿಜೆಪಿ ವ್ಯಂಗ್ಯ

ಬೆಂಗಳೂರು: ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯದ ನಾಯಕರಿಗೆ ಪ್ರವೇಶಕ್ಕೆ ಅವಕಾಶ ನೀಡದ ಘಟನೆ ನಡೆದಿದೆ. ಎಐಸಿಸಿ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಚಿವ ಬೈರತಿ ಸುರೇಶ್, ಡಾ. ಸುಧಾಕರ್ ಸೇರಿದಂತೆ ಹಲವು ನಾಯಕರು ತೆರಳಿದ್ದರು. ಆದರೆ ಪಾಸ್ ಇಲ್ಲದ ಕಾರಣಕ್ಕೆ ಅವರನ್ನು ಕಚೇರಿ ಒಳಗೆ ಬಿಟ್ಟಿಲ್ಲ ಎನ್ನಲಾಗಿದೆ.

ಇದೇ ವಿಚಾರವಾಗಿ ರಾಜ್ಯ ಬಿಜೆಪಿ ರಾಜ್ಯ ಕಾಂಗ್ರೆಸ್ ನಾಯಕರ ಕಾಲೆಳೆದಿದೆ. ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ!! ಎಂದು ವ್ಯಂಗವಾಡಿದೆ.

ಸ್ವಾಭಿಮಾನವನ್ನು ಅಡವಿಟ್ಟು ದೆಹಲಿಯ ನಾಯಕರ ಮುಂದೆ ನಡು ಬಗ್ಗಿಸಿ ನಿಂತುಕೊಂಡು ನಮ್ಮನ್ನು ದಯವಿಟ್ಟು ಒಳಗೆ ಬಿಡಿ ಎಂದು ಗೋಗರೆಯುತ್ತಿರುವುದನ್ನು ನೋಡಿದರೆ, ಕಾಂಗ್ರೆಸ್‌ ಹೈಕಮಾಂಡ್‌ ಕರ್ನಾಟಕದ ನಾಯಕರಿಗೆ ಯಾವ ರೀತಿ ಗೌರವ ನೀಡುತ್ತಿದೆ ಎಂಬುದು ತಿಳಿಯುತ್ತದೆ.

ಕರ್ನಾಟಕದ ಕಾಂಗ್ರೆಸ್‌ ನಾಯಕರುಗಳು ಹೈಕಮಾಂಡ್‌ ಮುಂದೆ ಎದೆ ಉಬ್ಬಿಸಿ ಮಾತನಾಡುವ ಕಾಲ ಬರುವುದು ಅಸಾಧ್ಯ ಎಂಬುದು ಖಚಿತ-ನಿಶ್ಚಿತ-ಖಂಡಿತ!! ಎಂದು ಟೀಕಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read