ಕಾಂಗ್ರೆಸ್ಸಿಗೆ ಜನರೇ ಪಾಠ ಕಲಿಸಿ ಓಡಿಸುವ ದಿನ ದೂರವಿಲ್ಲ; ‘ಕೈ’ ನಾಯಕರಿಗೆ ಬಿಜೆಪಿ ತಿರುಗೇಟು

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ನ್ಯಾಯಯುತವಾಗಿ ಚುನಾವಣೆ ಗೆಲ್ಲಲಾಗದ ಕಾಂಗ್ರೆಸ್‌ ಈಗ ದೇಶದಲ್ಲಿ ಅರಾಜಕತೆ ಮೂಡಿಸಲು ಎತ್ನಿಸುತ್ತಿರುವುದು ಇನ್ನು ಮರೆಯಾಗಿ ಉಳಿದಿಲ್ಲ ಎಂದು ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.

ಒಬ್ಬ ಚುನಾಯಿತ ಜನಪ್ರತಿನಿಧಿ ದೇಶದ ಪ್ರಧಾನಿಯ ಬಗ್ಗೆ ಈ ರೀತಿಯ ಹೇಳಿಗೆ ಕೊಡುವುದು ಪ್ರಜಾಪ್ರಭುತ್ವಕ್ಕೆ ಬಗೆಯುವ ದ್ರೋಹ. ಅಂದು ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜಾ ರಾಜಭವನಕ್ಕೆ ನುಗ್ಗುವ ಬೆದರಿಕೆ ಹಾಕಿದ್ದರು. ಇಂದು ರೋಣ ಶಾಸಕ ಜಿಎಸ್ ಪಾಟೀಲ್ ಬಾಂಗ್ಲಾ ದೇಶದಲ್ಲಿ ಪ್ರಧಾನಿ ಮನೆ ನುಗ್ಗಿದಂತೆ ನಮ್ಮ ದೇಶದಲ್ಲೂ ಪ್ರಧಾನಿ ಮನೆಗೆ ನುಗ್ಗುವ ದಿನ ದೂರವಿಲ್ಲ ಎಂದು ತಮ್ಮ ಎಲುಬಿಲ್ಲದ ನಾಲಗೆ ಹರಿಬಿಟ್ಟಿದ್ದಾರೆ ಎಂದು ಕಿಡಿಕಾರಿದೆ.

ಕಾಂಗ್ರೆಸ್ಸಿನ I.N.D.I ಮೈತ್ರಿಕೂಟ ಎಂದಿಗೂ ಭಾರತ, ಭಾರತೀಯತೆಯ ವಿರೋಧಿಗಳು. ವಿದೇಶೀ ಶಕ್ತಿಗಳೊಂದಿಗೆ ಸೇರಿ ಭಾರತದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಸುತ್ತಿರುವ ಕಾಂಗ್ರೆಸ್ಸಿಗೆ ಜನರೇ ಪಾಠ ಕಲಿಸಿ ಓಡಿಸುವ ದಿನ ದೂರವಿಲ್ಲ ಎಂದು ತಿರುಗೇಟು ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read