ಬಿತ್ತನೆ ಬೀಜ, ರಸಗೊಬ್ಬರಗಳ ಬೆಲೆಯೇರಿಕೆ ಜೊತೆಗೆ ರೈತರ ಪಾಲಿನ ಸಬ್ಸಿಡಿ ಹಣಕ್ಕೂ ಕನ್ನ ಹಾಕಿದ ಸರ್ಕಾರ; ಬಿಜೆಪಿ ಆಕ್ರೋಶ

ಬೆಂಗಳೂರು: ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಕುಣಿಕೆ ಹಾಕಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ಕಿಸಾನ್ ಸಮ್ಮಾನ್ ನಿಧಿ ಕಡಿತ, ಅಕ್ರಮ-ಸಕ್ರಮ ಯೋಜನೆ ರದ್ದು, ಬಿತ್ತನೆ ಬೀಜ ರಸಗೊಬ್ಬರ ಬೆಲೆ ಏರಿಕೆ, ರೈತ ವಿದ್ಯಾನಿಧಿ ರದ್ದು, ಹನಿ ನೀರಾವರಿ ಸಬ್ಸಿಡಿ ಕಡಿತ, ಹಾಲು ಉತ್ಪಾದಕರಿಗೆ ಸಬ್ಸಿಡಿ ದೋಖಾ ಮಾಡಿರುವ ರಾಜ್ಯ ಸರ್ಕಾರ ಅನ್ನದಾತನಿಗೆ ಅನ್ಯಾಯ ಮಾಡಿದೆ.

ನಾಡಿನ ರೈತ ಸಮುದಾಯಕ್ಕೆ ಅತಿ ಹೆಚ್ಚು ಅನ್ಯಾಯವೆಸಗಿದ ಸರ್ಕಾರವೆಂದರೆ ಅದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಸಿದ್ದರಾಯ್ಯನವರ ರೈತ ವಿರೋಧಿ ನೀತಿಯಿಂದ ಈಗಾಗಲೇ 1000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗ ಬಿತ್ತನೆ ಬೀಜ & ರಸಗೊಬ್ಬರಗಳ ಬೆಲೆಯೇರಿಕೆ ಜೊತೆ ರೈತರ ಪಾಲಿನ ಸಬ್ಸಿಡಿ ಹಣಕ್ಕೂ ಕನ್ನ ಹಾಕಿದೆ ರೈತ ಹಂತಕ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read