ಮಾದಕ ವಸ್ತುಗಳ ಅಡ್ಡವಾಗ್ತಿದೆ ಸಿಲಿಕಾನ್ ಸಿಟಿ , ಉಡ್ತಾ ಬೆಂಗಳೂರು ಎಂದು ಬಿಜೆಪಿ ವಾಗ್ಧಾಳಿ

ಬೆಂಗಳೂರು : ಹದಗೆಟ್ಟಿದೆ ಕಾನೂನು ಸುವ್ಯವಸ್ಥೆ, ಅನಾವರಣಗೊಂಡಿದೆ ಸರ್ಕಾರದ ಅವ್ಯವಸ್ಥೆ. ಮಾದಕ ವಸ್ತುಗಳ ಅಡ್ಡವಾಗ್ತಿದೆ ಸಿಲಿಕಾನ್ ಸಿಟಿ , ಉಡ್ತಾ ಬೆಂಗಳೂರು ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

ಹದಗೆಟ್ಟಿದೆ ಕಾನೂನು ಸುವ್ಯವಸ್ಥೆ, ಅನಾವರಣಗೊಂಡಿದೆ ಸರ್ಕಾರದ ಅವ್ಯವಸ್ಥೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರಲ್ಲಿ ಅನೈತಿಕ ಕೂಟಗಳು ಎಲ್ಲೆ ಮೀರಿ ನಡೆಯುತ್ತಿವೆ. ಸಿಲಿಕಾನ್ ಸಿಟಿ ಈಗ ಮಾದಕ ವಸ್ತುಗಳ ಅಡ್ಡ, ಎಗ್ಗಿಲ್ಲದೆ ನಡೆಯುತ್ತಿವೆ ಗಾಂಜಾ ಡ್ರಗ್ ರೇವ್ ಪಾರ್ಟಿಗಳು ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

ವಿದ್ಯಾ ಕಾಶಿ – ವಾಣಿಜ್ಯ ನಗರಿಗಳಾಗಿದ್ದ ಹುಬ್ಬಳ್ಳಿ-ಧಾರವಾಡವನ್ನು ಕ್ರೈಂ ಸಿಟಿಯನ್ನಾಗಿಸುತ್ತಿದೆ ಕಾಂಗ್ರೆಸ್ ಸರ್ಕಾರ. ಅವಳಿ ನಗರದಲ್ಲಿ ಪದೇ ಪದೇ ಯುವತಿಯರ ಕೊಲೆ, ಮಹಿಳೆಯರ ಮೇಲೆ ಹಲ್ಲೆಗಳು ನಡೆಯುತ್ತಿದ್ದರೂ ಸರ್ಕಾರ ಮಾತ್ರ ಸಂಪೂರ್ಣ ನಿದ್ರೆಗೆ ಶರಣಾಗಿರುವುದು ಅತ್ಯಂತ ನಾಚಿಕೆಗೇಡು. ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಅರಾಜಕತೆಯ ಓಲೈಕೆ ಆಡಳಿತದಲ್ಲಿ ಜಂಗಲ್ ರಾಜ್ ಆಗುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸಲಾಗದ ನೀವು ಕುರ್ಚಿ ಬಿಟ್ಟು ತೊಲಗುವುದು ನಾಡಿನ ಹಿತದೃಷ್ಟಿಯಿಂದ ಅತಿ ಉತ್ತಮ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read