ಮುಡಾ ಪ್ರಕರಣದಲ್ಲಿ ಎ1 ಆರೋಪಿ ಸಿದ್ಧರಾಮಯ್ಯ ಒಂದು ಕ್ಷಣವೂ ಅಧಿಕಾರದಲ್ಲಿರಲು ಯೋಗ್ಯರಲ್ಲ ಎಂದ ಬಿಜೆಪಿ

ಭ್ರಷ್ಟ ಸಿದ್ದರಾಮಯ್ಯ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರದ A1 ಆರೋಪಿ ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ. A1 ಆದ ಭ್ರಷ್ಟ‌ ಮುಖ್ಯಮಂತ್ರಿ ಒಂದು ಕ್ಷಣವೂ ಅಧಿಕಾರದಲ್ಲಿರಲು ಯೋಗ್ಯರಲ್ಲ ಎಂದು ಬಿಜೆಪಿ ತಿಳಿಸಿದೆ.

ಸಮಾಜವಾದಿಯ ಮುಖವಾಡ ಹಾಕಿಕೊಂಡಿದ್ದ ಮಜಾವಾದಿ A1 ಆರೋಪಿಯಾಗಿದ್ದಾರೆ. ನಾಡಿನ ಮುಖ್ಯಮಂತ್ರಿಯೇ A1 ಆಗಿರುವಾಗ ರಾಜ್ಯದ ಜನತೆಗೆ‌ ಕಾಂಗ್ರೆಸ್ ಯಾವ ಸಂದೇಶ ಕೊಡುತ್ತಿದೆ ಎಂದು ಪ್ರಶ್ನಿಸಿದೆ.

ಲಜ್ಜೆ ಬಿಟ್ಟು ಕುರ್ಚಿಗೆ ಅಂಟಿಕೊಂಡಿರುವ ಸಿದ್ದರಾಮಯ್ಯ ಈ ಕೂಡಲೇ ರಾಜೀನಾಮೆ ನೀಡುವ ಮೂಲಕ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಬೇಕಿದೆ. ಜತೆಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಲ್ಲರೂ ಕಾನೂನಿನ ಮುಂದೆ ಒಂದೇ ಎನ್ನುವ ಸಂದೇಶ ಸಾರಬೇಕಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read