ಕಟಕ್: ವಿಚಿತ್ರ ಘಟನೆಯೊಂದರಲ್ಲಿ ದರೋಡೆಕೋರನೊಬ್ಬ ತನ್ನ ಕದ್ದ ಬೈಕ್ ಅನ್ನು ಪೊಲೀಸರಿಗೆ ಒಪ್ಪಿಸುವ ಮೊದಲು ಮುತ್ತಿಟ್ಟಿದ್ದಾನೆ.
ಈ ಘಟನೆ ಮಂಗಳಬಾಗ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕಳ್ಳರಿಗೆ ಬೈಕ್ ಕದ್ದಿದ್ದಕ್ಕೆ ಯಾವುದೇ ನಾಚಿಕೆ ಅಥವಾ ಅಪರಾಧ ಭಾವನೆ ಇರಲಿಲ್ಲ. ಅವರಿಗೆ ಯಾವುದೇ ವಿಷಾದ ಅಥವಾ ಭಯವೂ ಇರಲಿಲ್ಲ ಎಂದು ಹೇಳಲಾಗಿದೆ.
ಈ ಕಳ್ಳರ ತಂಡವು ಎಸ್‌ಸಿಬಿ ವೈದ್ಯಕೀಯ ಕಾಲೇಜು ಆವರಣದಲ್ಲಿ ಬೈಕ್ ಗಳನ್ನು ಕದಿಯುತ್ತಿತ್ತು. ಈ ಸಂಬಂಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಕಳ್ಳರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಕದ್ದ ಬೈಕ್ ಬಿಡಿಭಾಗಗಳನ್ನು ಮಾರಾಟ ಮಾಡಿದ್ದ ಇನ್ನೊಬ್ಬ ವ್ಯಕ್ತಿಯನ್ನು ಕೂಡ ಬಂಧಿಸಲಾಯಿತು.
ಕೆಲವು ದಿನಗಳ ಹಿಂದೆ ಎಸ್‌ಸಿಬಿ ಪಾರ್ಕಿಂಗ್ ಸ್ಥಳದಿಂದ ಇಬ್ಬರು ಬೈಕ್‌ಗಳನ್ನು ಕದ್ದಿದ್ದರು. ಕದ್ದ ಬೈಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿ ಬಿಸ್ವಜಿತ್‌ನನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಕಳುಹಿಸುವಾಗ, ದರೋಡೆಕೋರ ಬೈಕ್‌ಗೆ ಮುತ್ತಿಕ್ಕಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾನೆ.