ಕ್ಯಾಲ್ಸಿಯಂ ಮತ್ತು ಬೀಟಾ ಕ್ಯಾರೋಟಿನ್ ಹೇರಳವಾಗಿರುವ ತರಕಾರಿ ಹಾಗಲಕಾಯಿ

ಹಾಗಲಕಾಯಿ ಬಾಯಿಗೆ ಕಹಿ ಇರಬಹುದು ಆದರೆ ಆರೋಗ್ಯಕ್ಕೆ ಸಿಹಿ. ಇದನ್ನು ನಿತ್ಯವಲ್ಲದಿದ್ದರೂ ವಾರಕ್ಕೆ ಎರಡರಿಂದ ಮೂರು ಬಾರಿ ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು.

ಅದರಲ್ಲೂ ಮಧುಮೇಹಿಗಳು ಇದನ್ನು ಸೇವಿಸುವುದರಿಂದ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ. ಇದನ್ನು ಪಲ್ಯ, ಗೊಜ್ಜು, ಸಾಂಬಾರು ರೂಪದಲ್ಲಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚುವುದಿಲ್ಲ. ಇದರಲ್ಲಿ ಕ್ಯಾಲ್ಸಿಯಂ ಮತ್ತು ಬೀಟಾ ಕ್ಯಾರೋಟಿನ್ ಹೇರಳವಾಗಿದ್ದು ಇದು ಆರೋಗ್ಯಕ್ಕೂ ಒಳ್ಳೆಯದು.

ಇದರ ರಸ ತೆಗೆದು ಹಸಿಯಾಗಿಯೇ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ತ್ವಚೆಯಲ್ಲಿ ನೆರಿಗೆ ಮತ್ತು ಸುಕ್ಕು ಉಂಟಾಗದು, ಇದರಲ್ಲಿರುವ ವಿಟಮಿನ್ ಎ ಮತ್ತು ಆಂಟಿ ಆಕ್ಸಿಡೆಂಟ್ ಗಳು ನಿಮ್ಮನ್ನು ದೀರ್ಘ ಕಾಲ ಆರೋಗ್ಯದಿಂದ ಇಡುತ್ತವೆ.

ಇವು ಮೊಡವೆಯನ್ನೂ ಕಡಿಮೆ ಮಾಡಿ ಸೂರ್ಯನ ಯುವಿ ಕಿರಣಗಳಿಂದ ರಕ್ತಿಸುತ್ತವೆ. ಕರುಳನ್ನು ಶುದ್ಧೀಕರಿಸಿ ಯಕೃತ್ತಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅಜೀರ್ಣ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read