ಬಿಸಿಯೂಟಕ್ಕೆ ಕೊಳೆತ ತರಕಾರಿ ಬಳಕೆ; ವಿಡಿಯೋ ವೈರಲ್

ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟಕ್ಕೆ ಕೊಳೆತ ತರಕಾರಿ ಬಳಸಿಕೊಂಡು ಅಡುಗೆ ತಯಾರಿಸಿರುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂತಹದೊಂದು ಘಟನೆ ಶಿವಮೊಗ್ಗ ತಾಲೂಕಿನ ಹೊಳಲೂರಿನಲ್ಲಿ ನಡೆದಿದೆ.

ಹೊಳಲೂರಿನ ಮಾದರಿ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಕೊಳೆತ ಟೊಮೆಟೊ, ಎಲೆಕೋಸನ್ನು ಬಳಸಿದ್ದು, ಇದನ್ನು ವಿಡಿಯೋ ಮಾಡಿಕೊಂಡವರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಈ ವಿಚಾರ ಪೋಷಕರ ಗಮನಕ್ಕೂ ಬಂದಿದ್ದು, ಬಳಿಕ ತಮ್ಮ ಮಕ್ಕಳಿಗೆ ಮನೆಯಿಂದಲೇ ಊಟ ಕಟ್ಟಿಕೊಟ್ಟಿದ್ದಾರೆ. ನಂತರ ಶಾಲೆಗೆ ಭೇಟಿ ನೀಡಿದ ಸಾರ್ವಜನಿಕರು, ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಅಡುಗೆ ಬದಲಿಸಿ, ಮಧ್ಯಾಹ್ನ ತಡವಾಗಿ ಮಕ್ಕಳಿಗೆ ಚಿತ್ರಾನ್ನ ಬಡಿಸಲಾಗಿದೆ. ಇದರ ಮಧ್ಯೆ ಶಿಕ್ಷಣ ಸಂಯೋಜಕ ಡಿ. ಮೋಹನ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read