ನವದೆಹಲಿ: ಹುಟ್ಟುಹಬ್ಬದ ಉಡುಗೊರೆ ವಿಚಾರವಾಗಿ ವ್ಯಕ್ತಿಯಿಬ್ಬ ತನ್ನ ಪತ್ನಿ ಹಾಗೂ ಅತ್ತೆಯನ್ನೇ ಕೊಲೆಗೈದಿರುವ ವಿಚಿತ್ರ ಘಟನೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.
ಯೋಗೇಶ್ ಪತ್ನಿ ಹಾಗೂ ಅತ್ತೆಯನ್ನು ಹತ್ಯೆಗೈದಿರುವ ಆರೋಪಿ. ಪ್ರಿಯಾ ಸೆಹಗಲ್ (34) ಹಾಗೂ ಕುಸುಮ್ ಸಿನ್ಹಾ (63) ಕೊಲೆಯಾದವರು. ಆಗಸ್ಟ್ 28ರಂದು ಮೊಮ್ಮಗ ಚಿರಾಗ್ ನ ಹುಟ್ಟುಹಬ್ಬಕೆಂದು ಕುಸುಮ್ ಸಿನ್ಹಾ ಆಗಮಿಸಿದ್ದರು. ಹುಟ್ಟುಹಬ್ಬದಲ್ಲಿ ಬಂದ ಉಡುಗೊರೆ ವಿಚಾರವಾಗಿ ಯೋಗೇಶ್ ಹಾಗೂ ಪತ್ನಿ ನಡುವೆ ಜಗಳ ಶುರುವಾಗಿದೆ. ಮಾರನೆ ದಿನವೇ ವಾಅಪಸ್ ಊರಿಗೆ ಹೋಗಬೇಕಿದ್ದ ಕುಸುಮ್, ಗಂಡ-ಹೆಂಡತಿ ಜಗಳ, ಮನಸ್ತಾಪ ಸರಿಪಡಿಸಿ ಹೋಗೋಣವೆಂದು ಮಗಳ ಮನೆಯಲ್ಲಿಯೇ ಉಳಿದುಕೊಂಡಿದ್ದರು.
ಆಗಸ್ಟ್ 30ರ ರಾತ್ರಿ ಯೋಗೇಶ್ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಲೆಗೈದು ಮಕ್ಕಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಪ್ರಿಯಾಳ ಸಹೋದರ ಕರೆ ಮಾಡಿದಾಗ ಫೋನ್ ಸ್ವೀಕರಿಸಿಲ್ಲ. ತಾಯಿ ಕುಸುಮ್ ಅವರಿಗೂ ಫೋನ್ ಮಾಡಿದಾಗ ಅವರೂ ಫೋನ್ ಸ್ವೀಕರಿಸದಿದ್ದಾಗ ಮನೆ ಬಳಿ ಬಂದು ನೋಡಿದ್ದಾರೆ. ಈ ವೇಳೆ ಮನೆಯ ಬಾಗಿಲಿಗೆ ರಕ್ತದ ಕಲೆಗಳು ಇರುವುದನ್ನು ಕಂಡು ಗಾಬರಿಗೊಂಡು, ಅಕ್ಕಪಕ್ಕದವರ ನೆರವಿನೊಂದಿಗೆ ಬಾಗಿಲು ಒಡೆದು ನೋಡಿದಾಗ ಸಹೋದರಿ ಪ್ರಿಯಾ ಹಾಗೂ ತಾಯಿ ಕುಸುಮ್ ರೂಮಿನಲ್ಲಿ ಕೊಲೆಯಾಗಿರುವುದು ಕಂಡುಬಂದಿದೆ.
ಮನೆಯಲ್ಲಿ ಯೋಗೇಶ್ ಹಾಗೂ ಮಗ ಚಿರಾಗ್ ಕೂಡ ಇರಲಿಲ್ಲ. ಕೆ.ಎನ್.ಮಾರ್ಗ್ ಪೊಲೀಸರಿಗೆ ಮಾಹಿತಿ ನಿದಲಾಗಿದ್ದು, ಘಟನ ಅಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಯೋಗೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.