BIGG NEWS :ಇನ್ಮುಂದೆ ಗ್ರಾಮಪಂಚಾಯಿತಿಯಲ್ಲೇ ಸಿಗಲಿವೆ `ಜನನ-ಮರಣ ಪ್ರಮಾಣ ಪತ್ರ’ : ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ

 

ಬೆಂಗಳೂರು : ಜನನ ಮರಣ ಪ್ರಮಾಣ ಪತ್ರಕ್ಕೆ ಅಲೆಯುವುದು, ಕಾಯವುದಕ್ಕೆ ಇನ್ನುಂದೆ ಕಡಿವಾಣ ಬೀಳಲಿದೆ. ಗ್ರಾಮಪಂಚಾಯಿತಿಯಲ್ಲೇ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ.

ಹೌದು, ರಾಜ್ಯ ಸರ್ಕಾರವು ಇನ್ಮುಂದೆ ಗ್ರಾಮೀಣ ಜನರು ಕಚೇರಿಗಳನ್ನು ಅಲೆಯುವುದನ್ನು ತಪ್ಪಿಸಲು ಗ್ರಾಮಪಂಚಾಯಿತಿಗಳಲ್ಲೇ ಜನನ-ಮರಣ ಪ್ರಮಾಣ ಪತ್ರಗಳನ್ನು ನೀಡಲು ನೀಡಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಓ) ಸಬ್ ರಿಜಿಸ್ಟರ್ ಗಳಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಅವರು ಘಟನೆ ನಡೆದ 30 ದಿನಗಳಲ್ಲಿ ಜನನ ಮತ್ತು ಮರಣವನ್ನು ನೋಂದಾಯಿಸಬಹುದು. ಜನನ ನೋಂದಣಿಗಾಗಿ ಗ್ರಾಮ ಲೆಕ್ಕಿಗರನ್ನು ಸಬ್ ರಿಜಿಸ್ಟ್ರಾರ್ ಗಳಾಗಿ ನೇಮಿಸಲಾಗಿದೆ. ಅವರು ಗ್ರಾಮ ಪಂಚಾಯತಿಯಲ್ಲೇ ಜನನ- ಮರಣ ಪ್ರಮಾಣಪತ್ರಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.

ರಾಜ್ಯ ಸರ್ಕಾರ ಈಗಾಗಲೇ ಪಂಚತಂತ್ರ 2.0 ತಂತ್ರಾಂಶದ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸಿದೆ ಮತ್ತು ಇದನ್ನು ಶೀಘ್ರದಲ್ಲೇ ಪ್ರಾಯೋಗಿಕ ಆಧಾರದ ಮೇಲೆ ಎರಡು ಆಯ್ದ ಜಿಲ್ಲೆಗಳಲ್ಲಿ ಪರಿಚಯಿಸಲಾಗುವುದು. ಪಂಚತಂತ್ರ 2.0 ಹೊಸ ಸಾಫ್ಟ್ ವೇರ್ ಪ್ಲಾಟ್ಫಾರ್ಮ್ ಆಗಿದ್ದು, ಇದು ಗ್ರಾಮ ಪಂಚಾಯಿತಿಗಳ ಎಲ್ಲಾ ಪ್ರಮುಖ ಕಾರ್ಯಗಳು ಮತ್ತು ಕಾರ್ಯಾಚರಣೆಗಳನ್ನು ಬಲಪಡಿಸಲು, ಡಿಜಿಟಲೀಕರಣಗೊಳಿಸಲು ಸಹಾಯವಾಗುತ್ತದೆ.

ಸರ್ಕಾರ ಜನನ-ಮರಣದ ಮಾಹಿತಿ ಪಡೆದು ಹೊಸ-ಹೊಸ ಯೋಜನೆಗಳ ನೀಡಲು ಸಹಾಯವಾಗಲಿದೆ. ಅಲ್ಲದೇ ಲಿಂಗಾನುಪಾತ, ಮರಣದ ಮಾಹಿತಿಯೂ ಸಿಗಲಿದೆ. ಒಟ್ಟಾರೆ ಕೆಲಸದ ಭಾರ ಕಡಿಮೆ, ಅಕ್ರಮ ಸರ್ಟಿಫಿಕೇಟ್‌ಗೆ ಡಿಜಿಟಲ್‌ ವ್ಯವಸ್ಥೆಯಿಂದ ಬ್ರೇಕ್‌ ಬಿಳಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read