ಕೀಬೋರ್ಡ್​ ಕಲಾವಿದನಿಗೆ ಹಿನ್ನೆಲೆಯಾಗಿ ಪಕ್ಷಿಯ ದನಿ: ಕ್ಯೂಟ್​ ವಿಡಿಯೋ ವೈರಲ್​

ಪ್ರಾಣಿ ಮತ್ತು ಪಕ್ಷಿ ಪ್ರಪಂಚದಲ್ಲಿ ವಿಶೇಷ ಮೆರುಗು ಇದೆ. ಪಕ್ಷಿಗಳು ಕೂಡ ಸಂಗೀತಕ್ಕೆ ಸಮಾನ. ಆದರೆ ಇಲ್ಲೊಂದು ವೈರಲ್​ ವಿಡಿಯೋದಲ್ಲಿ ಪಕ್ಷಿಯೊಂದು ಸಂಗೀತಗಾರನ ಕೀಬೋರ್ಡ್​ಗೆ ಹಿನ್ನೆಲೆ ಹಾಕುವುದನ್ನು ನೋಡಬಹುದು.
ಸಂಗೀತಗಾರ ಕೀಬೋರ್ಡ್ ನುಡಿಸುತ್ತಿರುವುದನ್ನು ಮತ್ತು ಹಕ್ಕಿಯು ಸಂಗೀತದ ಜೊತೆಗೆ ಶಿಳ್ಳೆ ಹೊಡೆಯುವುದನ್ನು ವೀಡಿಯೊ ತೋರಿಸುತ್ತದೆ. ಇದೊಂದು ಕ್ಯೂಟ್​ ವಿಡಿಯೋ ಆಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

ಸಂಗೀತಗಾರ ನಿಕೋಲಸ್ ಬಕ್ ಪಿಯೋವನ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಕೀಬೋರ್ಡ್‌ನ ಮುಂದೆ ಪಿಯೋವನ್ ಕುಳಿತಿರುವ ಸ್ಟ್ಯಾಂಡ್‌ನಲ್ಲಿ ಹಕ್ಕಿ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವನು ಕೀಬೋರ್ಡ್​ನಲ್ಲಿ ಸಂಗೀತ ಪ್ರಾರಂಭಿಸಿದಾಗ, ಪಕ್ಷಿಯು ಶಿಳ್ಳೆ ಹೊಡೆಯಲು ಪ್ರಾರಂಭಿಸುತ್ತದೆ ಮತ್ತು ಅದು ಸಂಪೂರ್ಣವಾಗಿ ಟ್ಯೂನ್ ಆಗಿದೆ.

ಕೆಲವು ತಿಂಗಳ ಹಿಂದೆ ವಿಡಿಯೋ ಶೇರ್ ಮಾಡಲಾಗಿತ್ತು. ಪೋಸ್ಟ್ ಮಾಡಿದ ನಂತರ, ಕ್ಲಿಪ್ ಹೆಚ್ಚು ವೈರಲ್ ಆಗಿದೆ. ಇಲ್ಲಿಯವರೆಗೆ, ಇದು 33 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ, ವೀಡಿಯೊ ಸುಮಾರು 2.3 ಮಿಲಿಯನ್ ಲೈಕ್‌ಗಳನ್ನು ಸ್ವೀಕರಿಸಿದೆ.

https://youtu.be/RtF4xy7ZCZ8

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read