ಟ್ಯಾಂಕರ್ ನಿಂದ ತೈಲ ಸೋರಿಕೆ; ಸಾಲುಸಾಲಾಗಿ ಜಾರಿಬಿದ್ದ ಬೈಕ್ ಸವಾರರು | Watch Video

ಹೈದರಾಬಾದ್‌ನ ಕುಶೈಗುಡ-ನಗರಂ ರಸ್ತೆಯಲ್ಲಿ ಟ್ಯಾಂಕರ್ ನಿಂದ ತೈಲ ಸೋರಿಕೆಯಾದ ನಂತರ, ಹಲವಾರು ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ.

ತೈಲ ಟ್ಯಾಂಕರ್ ಇಂಧನ ಸೋರಿಕೆಯಾದ ನಂತರ ರಸ್ತೆಯಲ್ಲಿ ಹತ್ತಾರು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿವೆ.

ಅಪಘಾತದ ನಂತರ ವೈರಲ್ ಆಗಿರುವ ವೀಡಿಯೊದಲ್ಲಿ, ಪುರುಷರು ಮತ್ತು ಮಹಿಳೆಯರು ತಮ್ಮ ದ್ವಿಚಕ್ರ ವಾಹನಗಳೊಂದಿಗೆ ರಸ್ತೆಯ ಮೇಲೆ ಜಾರಿ ಬಿದ್ದಿರುವುದು ದಾಖಲಾಗಿದೆ. ಅವರಲ್ಲಿ ಕೆಲವರು ಇನ್ನೂ ರಸ್ತೆ ಮೇಲಿದ್ದರೆ, ಇತರರು ತಮ್ಮ ವಾಹನಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಯಾವುದೇ ಅನಾಹುತವಾಗದಂತೆ ನೋಡಿಕೊಳ್ಳಲು ರಸ್ತೆಯ ಮೇಲೆ ಮಣ್ಣು ಹರಡಿದರು. ತೈಲ ಸೋರಿಕೆ ಪರಿಣಾಮ ಸಂಚಾರ ಅಸ್ತವ್ಯಸ್ತತೆಗೆ ಕಾರಣವಾಯಿತು.

ತೈಲವನ್ನು ಹೀರಿಕೊಳ್ಳಲು ರಸ್ತೆಯ ಮೇಲೆ ಮರದ ಪುಡಿ ಮತ್ತು ಮರಳನ್ನು ಸಿಂಪಡಿಸಿ ಶೀಘ್ರದಲ್ಲೇ ಸಂಚಾರ ವ್ಯತ್ಯಯವನ್ನು ಸರಿಪಡಿಸಲಾಗಿದ್ದು, ಕುಶೈಗುಡ-ನಗರಂ ರಸ್ತೆಯಲ್ಲಿ ಸಾಮಾನ್ಯ ಸಂಚಾರ ಪುನರಾರಂಭವಾಯಿತು

ಸೋರಿಕೆಗೆ ಕಾರಣವಾದ ಇಂಧನ ಟ್ಯಾಂಕರ್ ಚಾಲಕನನ್ನು ಇನ್ನೂ ಗುರುತಿಸಲಾಗಿಲ್ಲ. ಅವನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಪಘಾತದಲ್ಲಿ ಯಾವುದೇ ವಾಹನ ಸವಾರರಿಗೆ ಹೆಚ್ಚಿನ ಗಾಯಗಳಾಗಿಲ್ಲ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read