ಚಿಕ್ಕಮಗಳೂರು: ಸೇತುವೆ ಕಾಮಗಾರಿ ಗುಂಡಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿಯ ಬಳಿ ಅಪಘಾತ ಸಂಭವಿಸಿದೆ.
45 ವರ್ಷದ ಪುಷ್ಪರಾಜ್ ಮೃತಪಟ್ಟವರು ಎಂದು ಹೇಳಲಾಗಿದೆ. ರಾತ್ರಿ ತಮ್ಮಟದ ಹಳ್ಳಿ ಗೇಟ್ ಬಳಿ ಸೇತುವೆ ಕೆಳಗಿನ ಗುಂಡಿಗೆ ಬಿದ್ದು ಅವರು ಮೃತಪಟ್ಟಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.