BIG NEWS : ಟ್ರ್ಯಾಕ್ ನಲ್ಲೇ ಅಪಘಾತ : ಬೆಂಗಳೂರಿನ ಕಿರಿಯ ರೈಡರ್ ‘ಶ್ರೇಯಸ್ ಹರೀಶ್’ ದುರ್ಮರಣ

ಬೆಂಗಳೂರು : ಚೆನ್ನೈನ ಮದ್ರಾಸ್ ಇಂಟರ್ನ್ಯಾಶನಲ್ ಸರ್ಕ್ಯೂಟ್ನಲ್ಲಿ ಆಯೋಜಿಸಿದ್ದ ಇಂಡಿಯನ್ ನ್ಯಾಷನಲ್ ಮೋಟಾರ್ಸೈಕಲ್ ರೇಸಿಂಗ್  ಚಾಂಪಿಯನ್ ಶಿಪ್ ನಲ್ಲಿ ಕಿರಿಯ ರೈಡರ್ ಶ್ರೇಯಸ್ ಹರೀಶ್ ದುರ್ಮರಣಕ್ಕೀಡಾಗಿದ್ದಾರೆ.

ಶ್ರೇಯಸ್ ಹರೀಶ್ ಎಂಬ ಬೆಂಗಳೂರಿನ 13 ವರ್ಷದ ಬಾಲಕ ಸ್ಪರ್ದೆಯಲ್ಲಿ ಮೂರನೇ ಸುತ್ತಿನ ರೈಡಿಂಗ್ ವೇಳೆ ಅಪಘಾತಕ್ಕೆ ಈಡಾಗಿದ್ದು, ತಲೆಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ.ಈ ಹಿನ್ನೆಲೆ ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿದ್ದ ಉಳಿದ ರೇಸ್   ಗಳನ್ನು  ರದ್ದುಗೊಳಿಸಿದೆ.

ರಾಷ್ಟ್ರಮಟ್ಟದಲ್ಲಿ ಹಲವಾರು ರೇಸ್​ಗಳಲ್ಲಿ ಭಾಗಿಯಾಗಿ ಅನೇಕ ಪ್ರಶಸ್ತಿಗೆ ಶ್ರೇಯಸ್ ಭಾಜನರಾಗಿದ್ದರು. ಶ್ರೇಯಸ್ ಸಾವಿಗೆ ಪೋಷಕರು ಮಮ್ಮುಲ ಮರುಗಿದ್ದಾರೆ.

 

 

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read